ನವದೆಹಲಿ(ಡಿ.28):ಗುರುವಾರ ಲೋಕಸಭೆಯಲ್ಲಿ ಟ್ರಿಪಲ್ ತಲಾಖ್ ಬಿಲ್ ಪಾಸ್ ಆಗಿದೆ. ಈ ಬೆನ್ನಲ್ಲೆ ಎಐಎಮ್‍ಐಎಮ್ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಪ್ರತಿಕ್ರಿಯೆ ನೀಡಿದ್ದು, ಕಾನೂನನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.

ಮುಸ್ಲಿಂ ಪುರುಷರನ್ನು ಜೈಲಿನಲ್ಲಿ ಹಾಕಲು ಬಿಜೆಪಿ ಈ ಕಾನೂನನ್ನು ಜಾರಿಗೆ ತಂದಿದೆ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

ಟ್ರಿಪಲ್ ತಲಾಖ್ ಮುಸ್ಲಿಂ ಮಹಿಳೆಯರನ್ನು ಬೀದಿಯಲ್ಲಿ ತಂದು ನಿಲ್ಲಿಸಿದ್ದು, ಅವರನ್ನು ದುರ್ಬಲಗೊಳಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.