ಸೆವೋಕ್(ಜು,12):ಕಳೆದ ಕೆಲ ದಿನಗಳಿಂದ ಡಾರ್ಜಿಲಿಂಗ್‍ನಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಒಂದರ ಮೇಲೊಂದರಂತೆ ಅನಾಹುತ ಎದುರಾಗುತ್ತಿದ್ದು, ಸದ್ಯ ಸೆವೋಕ್ ನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂಕುಸಿತ ಕಂಡು ಬಂದಿದೆ.

ಸೆವೋಕ್ ನಗರದಲ್ಲಿ ಸಂಭವಿಸಿದ ಭೂಕುಸಿತದಿಂದಾಗಿ ಪಶ್ಚಿಮ ಬಂಗಾಳವನ್ನು ಸಿಕ್ಕಿಂ ರಾಜ್ಯದೊಂದಿಗೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 10 ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗಿದೆ.

ಈ ಹಿನ್ನೆಲೆಯಲ್ಲಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಜಿಲ್ಲಾಡಳಿತ ಮುಂದಾಗಿದ್ದು, ಸಮರೋಪಾದಿಯಲ್ಲಿ ರಸ್ತೆ ತೆರವು ಕಾರ್ಯಾಚರಣೆ ಕೈಗೊಂಡಿದೆ. ಎರಡು ದಿನಗಳ ಹಿಂದೆಯಷ್ಟೆ ಡಾರ್ಜಿಲಿಂಗ್ ಭೂಕುಸಿತಕ್ಕೆ ಇಬ್ಬರು ದಂಪತಿ ಬಲಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ