ಬೆಂಗಳೂರು:(ಜ24): ಲ್ಯಾನ್ಸ್ ನಾಯಕ್ ನಝೀರ್ ಅಹ್ಮದ್ ವಾನಿಗೆ ಭಾರತ ಸರ್ಕಾರ ನೀಡುವ ಅತ್ಯುನ್ನತ ಪ್ರಶಸ್ತಿಯಾದ ಅಶೋಕ ಚಕ್ರ ಪ್ರಶಸ್ತಿಯನ್ನು ನೀಡಲಾಗಿದೆ.

ಜಮ್ಮು ಮತ್ತು ಕಾಶ್ಮೀರದ ಶೋಫಿಯಾನ್ ಪ್ರದೇಶದ ಬತಗುಂದ್ ಗ್ರಾಮದಲ್ಲಿ ಕಳೆದ ವರ್ಷ ನಡೆದ ಭಯೋತ್ಪಾದಕರ ದಾಳಿಯವೇಳೆ ಲ್ಯಾನ್ಸ್ ನಾಯಕ್ ನಜೀರ್ ವಾನಿ ಹುತಾತ್ಮರಾಗಿದ್ದರು.

ಭಾರತೀಯ ಸೇನೆಗೆ ತನ್ನ ಜೀವವನ್ನೆ ತ್ಯಾಗ ಮಾಡಿದ ಅವರಿಗೆ ಈಗ ಮರಣೋತ್ತರ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಇಂತಹ ವ್ಯಕ್ತಿಗೆ ಸರ್ಕಾರ ಮರಣೋತ್ತರ ಪ್ರಶಸ್ತಿಯನ್ನು ನೀಡಿರುವುದು ಹೆಮ್ಮೆಯ ವಿಷಯ.