ಶಿವಮೊಗ್ಗ(ಜೂ,11): ಇಂದು ಶಿವಮೊಗ್ಗ ಸ್ಮಾರ್ಟ್ ಸಿಟಿ ಕಾಮಗಾರಿ ವೀಕ್ಷಣೆ ಸಂದರ್ಭದಲ್ಲಿ ಕಮಿಷನರ್ ಚಾರುಲತಾ ಜೊತೆಗೆ ಎಂಎಲ್.ಸಿ ಆಯುನೂರು ಮಂಜುನಾಥ್ ಏಕವಚನದಲ್ಲಿ ಮಾತಿನ ಚಕಮಕಿ ನಡೆಸಿದ್ದಾರೆ.

ಆಯನೂರು ಮಂಜುನಾಥ್ ಕಮಿಷನರ್ ಜೊತೆ ನಡೆಸಿದ ವಿಡಿಯೂ ವೈರಲ್ ಆಗಿದ್ದು, ಅದರಲ್ಲಿ ಕಮಿಷನರ್ ಚಾರುಲತಾ ಜೊತೆ ಏರು ಧ್ವನಿಯಲ್ಲಿ ಏಕವಚನದಲ್ಲಿ ಮಾತನಾಡಿದ್ದಾರೆ.

ಜನರು ಕಷ್ಟದಲ್ಲಿದ್ದಾಗ ನಿಮ್ಮಗೆ ಮಾರ್ಯದೆ ಕೊಡಬೇಕಾ, ನಾನೇನೂ ಕಾರ್ಪೊರೇಟಾರ್ ಅಲ್ಲ, ನಿಮ್ಮ ಹತ್ರ ದಮ್ಕಿ ಹಾಕಿಸಿಕೊಳ್ಳೋಕೆ ಎಂದು ಕಮಿಷನರ್ ಜೊತೆ ಮಾತಿನ ವಾಗ್ವಾದ ನಡೆಸಿದ್ದಾರೆ. ಆಗ ಕಮಿಷನರ್ ಚಾರುಲತಾ ಏಕವಚನದಲ್ಲಿ ಮಾತನಾಡಬೇಡಿ, ನಿಮ್ಮ ವಿರುದ್ದ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ. ಇನ್ನು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸಿ ತಮ್ಮಣ್ಣ ಸಮ್ಮುಖದಲ್ಲಿ ಘಟನೆ ನಡೆದಿದ್ದು, ಈ ಸಂದರ್ಭದಲ್ಲಿ ಕೆ.ಎಸ್ ಈಶ್ವರಪ್ಪ ಸಹ ಹಾಜರಿದ್ದರು ಎನ್ನಲಾಗಿದೆ.

ಕಮಿಷನರ್ ಚಾರುಲತಾ ಶಿವಮೊಗ್ಗದ ಖಡಕ್ ಅಧಿಕಾರಿಯಾಗಿದ್ದು, ಹಿಮಾಲಯದಲ್ಲಿ ಟ್ರೆಕ್ಕಿಂಗ್ ನಡೆಸಿದ ರಾಜ್ಯದ ಮೊದಲ ಐಎಎಸ್ ಅಧಿಕಾರಿ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.