ಬೆಂಗಳೂರು(ಡಿ:೨೭): ಹೊಸ ವರ್ಷ ಬರಮಾಡಿಕೊಳ್ಳಲು ಇನ್ನು ನಾಲ್ಕೇ ದಿನ ಬಾಕಿ ಇದೆ. ಆ ದಿನದಂದು ಪಬ್ ಹಾಗೂ ಬಾರ್ ಗಳು ತೆರೆಯಬೇಕೆಂದರೆ ಲೇಡಿ ಬೌನ್ಸರ್ಸ್ ಕಡ್ಡಾಯ ಎಂದು ಪೊಲೀಸರು ಷರತ್ತು ಹೊರಡಿಸಿದ್ದಾರೆ .
ಪಬ್ ಹಾಗೂ ಬಾರ್ ಗಳಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ತಡೆಯಲು ಪೊಲೀಸ್ ಇಲಾಖೆ ಈ ಕ್ರಮಕ್ಕೆ ಮುಂದಾಗಿರುವುದಾಗಿ ತಿಳಿಸಿದೆ. ಕಠಿಣ ಕಾನೂನು ಹೊರಡಿಸಿದಷ್ಟು ಹೊಸ ವರ್ಷ ಶಾಂತಿಯುತವಾಗಿರುತ್ತದೆ .ಹೊರ ರಾಜ್ಯಗಳಿಂದ ಲೇಡಿ ಬೌನ್ಸರ್ಸ್ ಕರೆತರಲು ಮಾಲೀಕರು ಚಿಂತನೆ ನಡೆಸಿದ್ದಾರೆ .