ಬಾಗಲಕೋಟೆ(ಜೂನ್.08) ಬಾಗಲಕೋಟೆಯಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಗ್ರಾಮ ವಾಸ್ತವ್ಯ ಯೋಜನೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಲೋಕಸಭೆ ಫಲಿತಾಂಶದ ಬಳಿಕ ಸಿಎಂ ಕುಮಾರಸ್ವಾಮಿಯವರ ಗ್ರಾಮ ವಾಸ್ತವ್ಯ ಯೋಜನೆ ಒಳ್ಳೆಯ ನಿರ್ಧಾರ, ನಾನು ಅದನ್ನು ಒಪ್ಪಿಕೊಳ್ಳುತ್ತೇನೆ. ನಾನು ಸಿಎಂ ಕುಮಾರಸ್ವಾಮಿಯವರನ್ನು ಟೀಕಿಸುವುದಿಲ್ಲ, ಗ್ರಾಮ ವಾಸ್ತವ್ಯ ಎನ್ನುವುದು ಓಳ್ಳೆಯ ಕಾರ್ಯಕ್ರಮಕ್ಕೆ ಎಂದಿದ್ದಾರೆ.

ರಾಜ್ಯದಲ್ಲಿ ಸರ್ಕಾರಿ ಶಾಲೆಗಳ ಮೇಜು, ಖುರ್ಚಿಗಳು, ಸರ್ಕಾರಿ ಶಾಲೆಗಳ ಕಟ್ಟಡಗಳು ಯಾವುದು ಸರಿಯಾದ ರೀತಿಯಲ್ಲಿಲ್ಲ. ಕುಮಾರಸ್ವಾಮಿಯವರು ರಾಜ್ಯದ ಬಹುತೇಕ ಗ್ರಾಮೀಣ ಪ್ರದೇಶದ ಹಳ್ಳಿಗಳಿಗೆ ಭೇಟಿಯನ್ನು ನೀಡಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಗಮನವನ್ನು ಹರಿಸಲಿ, ಸರ್ಕಾರಿ ಶಾಲೆಗಳಿಗೆ ಹೊಸ ರೂಪವನ್ನು ನೀಡಲಿ, ರಾಜ್ಯದ ಬಡಜನರ ಸಮಸ್ಯೆಗಳಿಗೆ ಕುಮಾರಸ್ವಾಮಿಯವರ ಸರ್ಕಾರ ಸ್ಪಂದಿಸಲಿ ಎಂದು ಬಿಜೆಪಿ ನಾಯಕ ಈಶ್ವರಪ್ಪ ನುಡಿದಿದ್ದಾರೆ.