ಮೆಲ್ಬೋರ್ನ್(ಡಿ :೨೭): ಆಸ್ಟ್ರೇಲಿಯಾ ವಿರುದ್ಧ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ ನಲ್ಲಿ ನಡೆಯುತ್ತಿರುವ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ, ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ೮೨ ರನ್ ಗಳಿಗೆ ತಮ್ಮ ವಿಕೆಟ್ ಒಪ್ಪಿಸಿದ್ದಾರೆ. ೨೦೪ ಎಸೆತಗಳ ಧೀರ್ಘ ಇನ್ನಿಂಗ್ಸ್ ಕಟ್ಟಿದ್ದ ಕೊಹ್ಲಿ ಶತಕದತ್ತ ಮುನ್ನುಗ್ಗುತ್ತಿರುವಾಗ ಎಡವಿದ್ದಾರೆ. ಇನ್ನಿಂಗ್ಸ್ ಬ್ರೇಕ್ ನ ಬಳಿಕ ಅಲ್ಪ ಮಟ್ಟದ ಫಿಟ್ನೆಸ್ ಸಮಸ್ಯೆ ಎದುರಿಸಿದ ಕೊಹ್ಲಿ, ಏಕಾಗ್ರತೆಗೆ ಭಗ್ನವನ್ನುಂಟುಮಾಡಿಕೊಂಡು ಆಕ್ರಮಣಕಾರಿ ಹೊಡೆತಕ್ಕೆ ಮುಂದಾದಾಗ, ಮಿಚೆಲ್ ಸ್ಟಾರ್ಕ್ ಎಸೆತಕ್ಕೆ ತಮ್ಮ ವಿಕೆಟ್ ಒಪ್ಪಿಸಿದ್ದಾರೆ .