ನ್ಯೂಝಿಲ್ಯಾಂಡ್(ಫೆ:04): ತನ್ನ ನೆಲದಲ್ಲಿ ನಡೆದ ಭಾರತ ವಿರುದ್ಧದ ಏಕದಿನ ಪಂದ್ಯದಲ್ಲಿ ಏಕದಿನ ಸರಣಿ ಸೋಲುವ ಮೂಲಕ ರ‍್ಯಾಂಕಿಂಗ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕಿಳಿದಿದೆ.

ಭಾನುವಾರ ನಡೆದ ಐದನೇ ಹಾಗೂ ಕೊನೆಯ ಪಂದ್ಯದಲ್ಲಿ ನ್ಯೂಝಿಲ್ಯಾಂಡ್ ಭಾರತದ ವಿರುದ್ಧ 35 ರನ್ ಗಳಿಂದ ಸೋಲುಂಡಿದ್ದು,ಈ ಮೂಲಕ 4-1 ರ ಅಂತರದಿಂದ ಭಾರತ ಸರಣಿಯನ್ನು ಕೈವಶ ಮಾಡಿಕೊಂಡಿದೆ.

ಐ ಸಿ ಸಿ ಬಿಡುಗಡೆಗೊಳಿಸಿರುವ ಹೊಸ ರ‍್ಯಾಂಕಿಂಗ್ ಪಟ್ಟಿಯಲ್ಲಿ ನ್ಯೂಝಿಲ್ಯಾಂಡ್ ಹಾಗೂ ದಕ್ಷಿಣ ಆಫ್ರಿಕಾ 111-111 ಅಂಕಗಳ ಸಮಬಲವಿದ್ದು,ದೇಶಾಂಶ ಅಂಕಗಳ ಆಧಾರದ ಮೇಲೆ ದಕ್ಷಿಣ ಆಫ್ರಿಕಾ ನ್ಯೂಝಿಲ್ಯಾಂಡ್ ತಂಡವನ್ನು ಹಿಂದಿಕ್ಕಿದೆ.