ನಾಪಿಯರ್(ಜ:23): ನ್ಯೂಜಿಲ್ಯಾಂಡ್ ಮತ್ತು ಭಾರತ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ತನ್ನ ಬ್ಯಾಟಿಂಗ್ ವ್ಯಫಲ್ಯತೆಯಿಂದ ಕೇವಲ 157 ರನ್ ಗಳಿಸಲಷ್ಟೇ ಸೀಮಿತವಾಯಿತು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಕಿವೀಸ್ ಉತ್ತಮ ಪ್ರದರ್ಶನ ನೀಡುವ ಭರವಸೆಯಿಂದ ಕ್ರೀಸ್ ಗೆ ಇಳಿದರು,ಆದರೆ ಭಾರತದ ಆಕ್ರಮಣಕಾರಿ ಬೌಲಿಂಗ್ ದಾಳಿಗೆ ಕಿವೀಸ್ ಬ್ಯಾಟ್ಸಮನ್ ಗಳು ರನ್ ಕಲೆಹಾಕುವಲ್ಲಿ ವಿಫಲರಾದರು.

ಭಾರತದ ಪರ ಕುಲದೀಪ್ ಯಾದವ್ 4,ಶಾಮಿ 3,ಚಾಹಲ್ 2 ಹಾಗೂ ಕೇದಾರ್ ಜಾದವ್ 1 ವಿಕೆಟ್ ಗಳಿಸಿದ್ದಾರೆ.