ಮಂಡ್ಯ:(ಫೆ15): ಭಯೋತ್ಪಾದಕರ ದಾಳಿಗೆ ಬಲಿಯಾದ ಮಂಡ್ಯದ ಮದ್ದೂರಿನ ಹುತಾತ್ಮ ಯೋಧ ಗುರು ಅವರ ಪತ್ನಿಯು ಪತಿಯನ್ನು ಕಳೆದು ಕೊಂಡು ಕಣ್ಣೀರಿನಲ್ಲಿಯೆ ಕೈತೊಳೆಯುತ್ತಿದ್ದಾರೆ.

ನನ್ನ ಗಂಡನನ್ನು ಕೊಂದವರನ್ನು ಬಿಡು ಬೇಡಿ ಹೇಗೆ ನನ್ನ ಗಂಡನನ್ನು ಕೊಂದರೊ ಹಾಗೆಯೇ ಉಗ್ರರನ್ನು ಕೊಲ್ಲಿ ಎಂಬ ಅಳಲನ್ನು ವ್ಯಕ್ತ ಪಡಿಸಿದ್ದಾರೆ.

ಗಂಡನ ಸಾವಿನ ಸುದ್ದಿಯನ್ನು ಅವರ ಗೆಳೆಯ ಯಶವಂತ ಅವರು ಫೋನ್ ಮಾಡಿ ನಡೆದ ಘಟನೆಯ ಬಗ್ಗೆ ಮಾಹಿತಿಯನ್ನು ನೀಡಿದರು. ಈ ಸುದ್ದಿ ಕೇಳಿ ತಡೆಯಲಾರದ ದುಃಖದ ಜೊತೆಗೆ ಅವರ ಆಕ್ರಂದನ ಮುಗಿಲು ಮುಟ್ಟಿದೆ.

ನನ್ನ ಗಂಡನನ್ನು ವಾಪಾಸ್ ಕೊಡಿ. ದೇಶ ಕಾಯುವ ಯೋಧರು ಈ ರೀತಿಯಾಗಿ ಸತ್ತು ಹೋದರೆ ಯೋಧರು ಯಾಕೆ ಬೇಕು ಎಂದು ಪ್ರಶ್ನಿಸಿ ಅಳಲನ್ನು ಹೊರಹಾಕಿದ್ದಾರೆ.