ಬೆಂಗಳೂರು(ಮಾ:15): ಸ್ಯಾಂಡಲ್ ವುಡ್ ನ ಯುವ ಪ್ರತಿಭೆಗಳಿಗೆ ಮೊದಲಿನಿಂದಲೂ ಪ್ರೋತ್ಸಾಹ ನೀಡುತ್ತಲೇ ಬಂದಿರುವ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕನ್ನಡ ಚಿತ್ರರಂಗದಲ್ಲಿ ಯಾವುದೇ ಉತ್ತಮ ಚಿತ್ರಗಳು ಬಂದರೂ ಆ ಚಿತ್ರತಂಡಕ್ಕೆ ಕಿಚ್ಚನ ಕಡೆಯಿಂದ ಒಂದು ಅಭಿನಂದನೆ ಇದ್ದೇ ಇರುತ್ತದೆ.

ಸದ್ಯ ಮಹೇಶ್ ಚಿನ್ಮಯ್ ಆಕ್ಷನ್ ಕಟ್ ಹೇಳಿರುವ ಚಾಣಾಕ್ಷ ಚಿತ್ರದ ಟ್ರೈಲರ್ ಬಿಡುಗಡೆಗೊಂಡಿದ್ದು,ಇದಕ್ಕೆ ಕಿಚ್ಚ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‘ಕೆಲವು ವರ್ಷಗಳ ಹಿಂದೆ ನಿನ್ನನ್ನು ನೋಡಿದ ಹಾಗೆ ಈಗಲೂ ಇದ್ದೀಯ,ನೀನೊಬ್ಬ ಪ್ರಾಮಾಣಿಕ ಹುಡುಗ,ಚಾಣಾಕ್ಷ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದು ನನಗೆ ಖುಷಿ ತಂದಿದೆ,ಶುಭವಾಗಲಿ ಸಹೋದರ ಎಂದು ತಮ್ಮ ಟ್ವಿಟ್ಟರ್ ಮೂಲಕ ಧರ್ಮ ಕೀರ್ತಿರಾಜ್ ಗೆ ವಿಶ್ ಮಾಡಿದ್ದಾರೆ.