ಸ್ಯಾಂಡಲ್ ವುಡ್ ಸಿನಿಮಾ ಒಂದು 05 ಭಾಷೆಗಳಲ್ಲಿ ಭಾರೀ ಹವಾ ಮಾಡುವುದರ ಜೊತೆಗೆ ದೇಶವಲ್ಲದೆ ವಿದೇಶಗಳಲ್ಲಿಯೂ ಭಾರೀ ಸದ್ದು ಮಾಡಿದ ಕೆಜಿಎಫ್ ಸಿನಿಮಾವು ಎಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದೆ. ಇದೀಗ ಪಾಕ್‍ನಲ್ಲಿಯೂ ಬಿಡುಗಡೆಗೆ ಸಜ್ಜಾಗಿದೆ.

ಕೆಜಿಎಫ್‍ನ ಹಿಂದಿ ಅವತರಿಣಿಕೆ ಬಿಡುಗಡೆಯಾಗುತ್ತಿದ್ದು, ಸಿನಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಇಸ್ಲಾಮಾಬಾದ್‍ನ ಕ್ಲಬ್ ಮಾಲ್‍ನಲ್ಲಿ ಇಂದು ರಾತ್ರಿ 09 ಗಂಟೆಗೆ ಬಿಡುಗಡೆಯಾಗುತ್ತಿದೆ.

ಪಾಕಿಸ್ತಾನದಲ್ಲಿ ಬಿಡುಗಡೆಯಾದ ಮೊದಲ ಕನ್ನಡ ಚಿತ್ರದ ಹಿಂದಿ ಅವತರಣಿಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇನ್ನೇನು ಬಿಡುಗಡೆಗೆ ಕೆಲವೇ ಗಂಟೆಗಳು ಬಾಕಿಯಿವೆ.