ಮುಂಬೈ:(ಜ12): ಎಲ್ಲೆಡೆ ಕೆಜಿಎಫ್ ಸಿನಿಮಾದ ಹವಾ ಹೆಚ್ಚಾಗುತ್ತಿದೆ. ಇದೀಗ ಬಾಲಿವುಡ್‍ನಲ್ಲಿ ಭಾರೀ ಹೆಸರು ಮಾಡಿದೆ. ಬಾಲಿವುಡ್‍ನಲ್ಲಿ ಬಾಹುಬಲಿ ಹಾಗೂ 2.0 ಸಿನಿಮಾ ಈ ಹಿಂದೇ ಹೆಚ್ಚು ಕಲೆಕ್ಷನ್ ಮಾಡಿದ್ದವು, ಈಗ ಇವೆರೆಡು ಸಿನಿಮಾದ ನಂತರ ಕೆಜಿಎಫ್ ಹೊಸ ದಾಖಲೆಯನ್ನು ಸೃಷ್ಟಿಸಿದೆ.

ಸ್ಯಾಂಡಲ್‍ವುಡ್‍ನಲ್ಲಿ ನೂರು ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದ ಕೆಜಿಎಫ್ ಸಿನಿಮಾವು ಹಿಂದಿಯಲ್ಲಿ 40. 39 ಕೋಟಿ ಹಣಗಳಿಕೆ ಮಾಡಿದೆ ಎಂದು ತರುಣ್ ಆದರ್ಶ್ ಟ್ವೀಟ್ ಮಾಡಿದ್ದಾರೆ. ಈ ಮೂಲಕ ಬಾಹುಬಲಿ ಹಾಗೂ 2.0 ಸಿನಿಮಾದ ನಂತರ ಹೆಚ್ಚು ಗಳಿಕೆ ಮಾಡಿದ ಸಿನಿಮಾದ ಸ್ಥಾನದಲ್ಲಿದೆ.

ಒಟ್ಟಿನಲ್ಲಿ ದಿನೇ-ದಿನೆ ಕೆಜಿಎಫ್ ನೋಡುವವರ ಸಂಖ್ಯೆ ಹೆಚ್ಚಾಗುತ್ತಿದ್ದು. ಬಾಕ್ಸ್ ಆಫೀಸ್‍ನಲ್ಲಿ ಹೆಚ್ಚು ಕಲೆಕ್ಷನ್ ಮಾಡುತ್ತಿದೆ.