ಬೆಂಗಳೂರು(ಆ:20): ಬಾರೀ ಮಳೆಯಿಂದಾಗಿ ಉತ್ತರ ಕರ್ನಾಟಕದ ಕೆಲವು ಪ್ರದೇಶಗಳು ಪ್ರವಾಹದಿಂದ ಸಂಕಷ್ಟಕ್ಕೆ ಒಳಗಾಗಿವೆ. ಇನ್ನು ಕನ್ನಡಿಗರಿಗೆ, ಕರ್ನಾಟಕ ರಾಜ್ಯಕ್ಕೆ ಯಾವುದೇ ರೀತಿಯ ಸಂಕಷ್ಟ ಬಂದಾಗ ಚಿತ್ರರಂಗ ಸದಾ ಜೊತೆಯಲ್ಲಿರುತ್ತದೆ. ಈಗಾಗಲೇ ಸಿನಿಮಾ ಕಲಾವಿದರು ಮತ್ತು ತಂತ್ರಜ್ಞರು ನೆರೆ ಸಂತ್ರಸ್ಥರಿಗಾಗಿ ಪರಿಹಾರ ನೀಡಿದ್ದಾರೆ.

ಇದೀಗ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ವತಿಯಿಂದ ಕರ್ನಾಟಕ ರಾಜ್ಯ ನೆರೆ ಸಂತ್ರಸ್ಥರಿಗೆ 25 ಲಕ್ಷ ಹಣ ಸಹಾಯ ಮಾಡಲಾಗಿದೆ. ಈ ಕುರಿತು ಚಿತ್ರಮಂಡಳಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿಯಾಗಿ , 25 ರೂಪಾಯಿಯ ಲಕ್ಷ ಚೆಕ್ ಅನ್ನು ಹಸ್ತಾಂತರಿಸಿದ್ದಾರೆ.

ಈ ವೇಳೆ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷರುಗಳಾದ ಸಾರಾ ಗೋವಿಂದು, ಚಿನ್ನೇಗೌಡ, ಥಾಮಸ್ ಡಿಸೋಜಾ, ನಿರ್ದೇಶಕ ನಾಗಣ್ಣ ಸೇರಿದಂತೆ ಅನೇಕರು ಹಾಜರಿದ್ದರು. ಈ ಕುರಿತು ನಟ ಜಗ್ಗೇಶ್ ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.