ಮುಂಬೈ(ಜ.18): ಬಾಲಿವುಡ್‍ನಲ್ಲಿ ಕ್ವೀನ್ ಅಂತಾನೆ ಫೇಮಸ್ ಆಗಿರುವ ನಟಿ ಕಂಗನಾ ರಾನಾವತ್ ತನ್ನ ತವರು ಹಿಮಾಚಲ ಪ್ರದೇಶದಲ್ಲಿ ಶಕ್ತಿ ದೇವಸ್ಥಾನವನ್ನು ನಿರ್ಮಿಸುವ ಮೂಲಕ ತನ್ನ ಕನಸನ್ನು ಪೊರೈಸಿಕೊಂಡಿದ್ದಾರೆ.

ಇಂದು ಕುಟುಂಬದವರೊಂದಿಗೆ ದೇವಸ್ಥಾನಕ್ಕೆ ಭೇಟಿ ನೀಡಿದ ಕಂಗನಾ ಜನಾಂಗೀಯ ಉಡುಪಿನಲ್ಲಿ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ. ದೇವಾಲಯದ ನಿರ್ಮಾಣಕ್ಕಾಗಿ ಮೂರು ವರ್ಷ ತೆಗೆದುಕೊಂಡಿದ್ದು, ತವರಿನಲ್ಲಿ ದೇವಸ್ಥಾನವನ್ನು ನಿರ್ಮಿಸುವುದು ಕಂಗಾನ ಕನಸ್ಸಗಿತ್ತಂತೆ.

ಈ ಕುರಿತು ಪ್ರತಿಕ್ರಿಯಿಸಿರುವ ಕಂಗನಾ, ಇದು ಒಂದು ಕುತೂಹಲಕಾರಿಯಾದ ಸಂಗತಿಯಾಗಿದೆ. ಕುಟುಂಬದ ಜೊತೆ ಪವಿತ್ರ ಸ್ಥಳಕ್ಕೆ ಭೇಟಿ ನೀಡಿರುವುದು ಸೋತೋಷವಾಗಿದೆ ಎಂದಿದ್ದಾರೆ.

ಇನ್ನು ಕಂಗನಾ ಮಣಿಕರ್ಣಿಕ ಸಿನಿಮಾದಲ್ಲಿ ಝಾನ್ಸಿ ರಾಣಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಬಿಡುಗಡೆಗೂ ಮುನ್ನ ಭಾರೀ ಕುತೂಹಲ ಮೂಡಿಸಿದೆ. ಅವರ ಅಭಿಮಾನಿಗಳು ತಮ್ಮ ನೆಚ್ಚಿನ ನಟಿಯ ಅಭಿನಯ ನೋಡಲು ಕಾತುರರಾಗಿದ್ದರೆ