ಬರೋಡಾ(ಫೆ:08): 2018 ರ ಡಿ.28 ರಂದು ಅಪಘಾತಕ್ಕೀಡಾಗಿ ಬರೋಡಾ ದ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿರುವ ಭಾರತ ತಂಡದ ಮಾಜಿ ಕ್ರಿಕೆಟಿಗ ಜೇಕೆಬ್ ಮಾರ್ಟಿನ್ ಅವರಿಗೆ ಕೆ.ಎಲ್ ರಾಹುಲ್ ಸಹಾಯ ಮಾಡಲು ಮುಂದಾಗಿದ್ದಾರೆ.

ಮಾರ್ಟಿನ್ ಆರ್ಥಿಕ ಸಂಕಷ್ಟದಲ್ಲಿದ್ದಾರೆ ಎನ್ನುವ ವಿಷಯ ತಿಳಿಯುತ್ತಿದ್ದಂತೆ ರಾಹುಲ್, ಅವರ ಕುಟುಂಬಕ್ಕೆ ಸಂಪರ್ಕಿಸಿದ್ದಾರೆ ಅದೇ ದಿನ ಮಾರ್ಟಿನ್ ಖಾತೆಗೆ ದೊಡ್ಡ ಮೊತ್ತದ ಹಣ ಜಮಾ ಮಾಡಲಾಗಿದೆ ಎಂದು ವರದಿಯಾಗಿದ್ದು,ಹಣದ ಸಹಾಯ ಪಡೆದಿರುವುದಾಗಿ ಮಾರ್ಟಿನ್ ಕುಟುಂಬ ಸ್ಪಷ್ಟಪಡಿಸಿದೆ.

ಬಿಸಿಸಿಐ,ಬರೋಡ ಕ್ರಿಕೆಟ್ ಸಂಸ್ಥೆ,ಸೌರವ್ ಗಂಗೂಲಿ ಸಹಾ ಆರ್ಥಿಕ ಸಹಾಯ ಮಾಡಿದ್ದಾರೆ,ಇವರ ಜೊತೆಗೆ ಮಾಜಿ ವೇಗಿ ಜಹೀರ್ ಖಾನ್, ಇರ್ಫಾನ್ ಪಠಾಣ್,ಕ್ರುನಾಲ್ ಪಾಂಡ್ಯ ಸೇರಿದಂತೆ ಹಲವು ಕ್ರಿಕೆಟ್ ದಿಗ್ಗಜರು ನೆರವು ನೀಡಿ ಶೀಘ್ರದಲ್ಲೇ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸಿದ್ದಾರೆ.