ಮೈಸೂರು(ಫೆ:14): ಮೈಸೂರಿನಲ್ಲಿ ನಡೆಯುತ್ತಿರುವ ಭಾರತ ಈ ತಂಡ ಹಾಗೂ ಇಂಗ್ಲೆಂಡ್ ಲಯನ್ಸ್ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ ಕ್ರಿಕೆಟಿಗ ಕೆ ಎಲ್ ರಾಹುಲ್ ಕೊನೆಗೂ ಫಾರ್ಮ್ ಗೆ ಮರಳಿದ್ದಾರೆ.

ಖಾಸಗಿ ಶೋ ಒಂದರಲ್ಲಿ ಅಸಭ್ಯ ಕಾಮೆಂಟ್ ಹಾಗೂ ಕಳಪೆ ಫಾರ್ಮ್ ನಿಂದ ವೃತ್ತಿ ಬದುಕಿಗೆ ಕಂಟಕ ತಂದುಕೊಂಡಿದ್ದ ರಾಹುಲ್ ಇದೀಗ ಫಾರ್ಮ್ ಗೆ ಮರಳಿದ್ದಾರೆ,ಹೀಗಾಗಿ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಗೆ ಆಯ್ಕೆಯಾಗುವ ಸಾಮರ್ಥ್ಯ ಸಾಬೀತುಪಡಿಸಿದ್ದಾರೆ.

ಇಂಗ್ಲೆಂಡ್ ಲಯನ್ಸ್ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ 89 ರನ್ ಗಳಿಸಿದ್ದ ರಾಹುಲ್ ದ್ವಿತೀಯ ಟೆಸ್ಟ್ ಪಂದ್ಯದಲ್ಲೂ ಉತ್ತಮ ಪ್ರದರ್ಶನ ನೀಡಿ ತಂಡಕ್ಕೆ 86 ರನ್ ನೀಡಿ ಆಸರೆಯಾಗಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಟಿ 20 ಸರಣಿಗೆ ಅಜಿಂಕ್ಯ ರಹಾನೆ ಮತ್ತು ರಾಹುಲ್ ಗೆ ಸ್ಥಾನ ನೀಡುವ ಬಗ್ಗೆ ಆಯ್ಕೆ ಸಮಿತಿ ಚಿಂತನೆ ನಡೆಸಿದೆ,ಇದೀಗ ತಕ್ಕ ಸಮಯದಲ್ಲಿ ಫಾರ್ಮ್ ಕಂಡುಕೊಂಡಿರುವುದು ರಾಹುಲ್ ಗೆ ಅದೃಷ್ಟ ಖುಲಾಯಿಸಿದಂತಾಗಿದೆ.