ತುಮಕೂರು:(ಜೂನ್.12): ತುಮಕೂರಿನ ಬೇಳೂರು ಬಾಯರ್ಸ್ ಮೆಡಿಷನ್ ಕಂಪನಿಯವರು ಪತ್ರಕರ್ತರ ಮೇಲೆ ಮರಣಾಂತಿಕ ಹಲ್ಲೆ ನಡೆಸಿರುವುದನ್ನು ಪತ್ರಕರ್ತರ ಸಂಘ ಖಂಡಿಸಿದೆ.

ಈ ಕೈಗಾರಿಕೆಯಿಂದ ಸ್ಥಳೀಯ ಪರಿಸರಕ್ಕೆ ಹಾನಿಯಾಗುವುದರ ಜೊತೆಗೆ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ನಿಟ್ಟಿನಲ್ಲಿ ವರದಿ ಮಾಡಲು ಹೋದ ಪತ್ರಕರ್ತರ ಮೇಲೆ ಸಿಬ್ಬಂದಿಗಳು ಮರಣಾಂತಿಕ ಹಲ್ಲೆ ಮಾಡಿರುವುದು ಸರಿಯೇ ಎಂದು ಉಳಿದ ಪತ್ರಕರ್ತರು ಆಕ್ರೋಶವನ್ನು ಹೊರಹಾಕಿದ್ದಾರೆ.

ಪರಿಸಕ್ಕೆ ಹಾಗೂ ಸ್ಥಳೀಯರಿಗೆ ತೊಂದರೆ ಉಂಟಾದರು ಪರವಾಗಿಲ್ಲ, ನಾವು ಮಾಡಿದ್ದೇ ಸರಿ ಎಂಬ ದರ್ಪವನ್ನು ಹೊರಹಾಕುವ ಮೂಲಕ ಗೂಂಡಾಗಿ ಮಾಡಿದ್ದಾರೆ.

ಇನ್ನೂ ಇಂತಹ ಎಷ್ಟೋ ಕೈಗಾರಿಕೆಗಳಿಂದ ಪರಿಸರಕ್ಕೆ ಹಾಗೂ ಸಮಾಜಕ್ಕೆ ಹಾನಿಯಾಗುತ್ತಿದ್ದು, ಇದನ್ನು ಪತ್ರಕರ್ತರು ವರದಿ ಮಾಡಲು ಮುಂದಾದರೆ ಈ ರೀತಿ ಹಲ್ಲೆಗೆ ಒಳಗಾಗುವುದು ಖಚಿತವಾ..? ಎಂಬ ಪ್ರಶ್ನೆ ಪತ್ರಕರ್ತರಲ್ಲಿ ತಲೆದೂರಿದೆ.