ಮಂಗಳೂರು, ಅ-15: ಕರ್ನಾಟಕ ಕರಾವಳಿಯಲ್ಲಿ ಕಣ್ಗಾವಲಿಗಾಗಿ ಅತ್ಯಾಧುನಿಕ ಹಡಗು ‘ವರಹ’ ಮಂಗಳವಾರ ಪಣಂಬೂರು ಕೋಸ್ಟ್‍ಗಾರ್ಡ್ ಕೇಂದ್ರಕ್ಕೆ ಆಗಮಿಸಿದೆ.
ಈ ನೂತನ ಹಡಗನ್ನು ಲಾರ್ಸನ್ & ಟರ್ಬೊ ನಿರ್ಮಿಸಿದ್ದು, ಇದನ್ನು ಸಮುದ್ರ ಮಾರ್ಗದಲ್ಲಿ ಕಳ್ಳಸಾಗಾಣಿಕೆ, ತೈಲ ಸೋರಿಕೆ, ತಪಾಸಣೆ ಭದ್ರತೆಯ ಕಣ್ಗಾವಲು ಇರಿಸಲು ಈ ಹಡಗನ್ನು ಬಳಸಲಾಗುತ್ತದೆ.

ತುರ್ತು ಸಂದರ್ಭಗಳಲ್ಲಿ ಎರಡು ಇಂಜಿನ್‍ಗಳ ಹೆಲಿಕಾಪ್ಟರ್‍ಗಳನ್ನು ಹೊತ್ತೊಯ್ಯಬಲ್ಲ ಈ ಹಡಗು 30 ಎಂ.ಎಂ.ಗನ್, 12.7 ಎಂ.ಎಂ. ಗನ್, ಅತ್ಯಾಧುನಿಕ ರಾಡಾರ್, ಸೆನ್ಸಾರ್, ಹೈಸ್ಪೀಡ್ ಬೋಟ್‍ಗಳ ಸೌಲಭ್ಯ ಹೊಂದಿದೆ. 2100 ಟನ್ ಭಾರದ ಈ ಹಡಗು ಗಂಟೆಗೆ 26 ನಾಟಿಕಲ್ ಮೈಲ್ ವೇಗದಲ್ಲಿ ಸಂಚರಿಸುತ್ತದೆ. ಈ ಹಡಗು 14 ಅಧಿಕಾರಿಗಳು, 89 ಮಂದಿ ಸಿಬ್ಬಂದಿಗಳನ್ನು ಒಳಗೊಂಡಿದ್ದು, ಯಾವುದೇ ಕ್ಷಣದಲ್ಲಿಯೂ ಕಾರ್ಯಾಚರಣೆಗೆ ಸಿದ್ಧವಾಗಿರಿಸಿದ್ದು, ಪಶ್ಚಿಮ ಕೋಸ್ಟ್‍ಗಾರ್ಡ್ ಕಮಾಂಡಿಗ್ ಕೇಂದ್ರ ಇದರ ನಿಯಂತ್ರಣ ಹೊಂದಿದೆ.
ಈ ಹಡಗನ್ನು ಕೋಸ್ಟ್ ಗಾರ್ಡ್‍ನ ಕಮಾಂಡರ್ ಎಸ್ ಎಸ್ ದಾಸಿಲ, ಹಿರಿಯ ಅಧಿಕಾರಿಗಳಾದ ರಾಜ್‍ಕಮಲ್ ಸಿನ್ಹಾ, ಲಕ್ಷ್ಮಿಕಾಂತ್ ಗಜಿಭಿಯೆ, ಸಿಐಎಸ್‍ಎಫ್ ಅಧಿಕಾರಿ ಅಶುತೋಷ್ ಗೌರ್ ಮುಂತಾದವರು ಸ್ವಾಗತಿಸಿದರು.