ಮುಂಬೈ(ಜೂ,17): ರಿಲಯನ್ಸ್ ಜಿಯೋ ಗ್ರಾಹಕರಿಗೆ ಹಲವಾರು ರೀತಿಯಲ್ಲಿ ಉಚಿತ ಸೇವೆಗಳನ್ನು ನೀಡುತ್ತಾ ಗ್ರಾಹಕರ ಮನ ಗೆದ್ದಿರುವ ಜಿಯೊ ಮತ್ತೆ ಗ್ರಾಹಕರನ್ನು ಆಕರ್ಷಿಸಲು ಮುಂದಾಗಿದೆ.

ಹೌದು ಈಗ ಕಂಪನಿ ಹೊಸದಾಗಿ ತನ್ನ ಗ್ರಾಹಕರಿಗೆ ಕೆಲವೊಂದು ಪ್ಲಾನ್ ಗಳನ್ನು ನೀಡಿದ್ದು, ಒಮ್ಮೆ ರಿಚಾರ್ಜ್ ಮಾಡಿದರೆ ಒಂದು ವರ್ಷದವರೆಗಿನ ಎಲ್ಲ ಸೇವೆಗಳು ಉಚಿತವಾಗಿ ಲಭ್ಯವಾಗಲಿದೆ. ಇದು ದೀರ್ಘಾವಧಿ ಕೆಟಗರಿಯಲ್ಲಿ ಬರುವ ಪ್ಲಾನ್ ಆಗಿದ್ದು, 449 ರೀಚಾರ್ಜ್ ಪ್ಲಾನ್ ಮೂಲಕ 3 ತಿಂಗಳವರೆಗೆ ಉಚಿತ ಸೇವೆಗಳನ್ನು ಪಡೆಯಬಹುದಾಗಿದೆ.

ಇನ್ನು ಈ ಪ್ಲಾನ್ ಅಡಿಯಲ್ಲಿ ಗ್ರಾಹಕರು ಪ್ರತಿದಿನ 1.5 ಜಿಬಿ ಡೇಟಾ ಹಾಗೂ 91 ದಿನಗಳವರೆಗೆ 136.5 ಜಿಬಿ ಡೇಟಾ ಸಿಗಲಿದ್ದು, 100 ಎಸ್.ಎಂ.ಎಸ್ ಪಡೆಯಬಹುದು. ಹಾಗೂ 3 ತಿಂಗಳ ಕಾಲ ಅನಿಮಿತ ಕರೆ ಸೌಲಭ್ಯ ಗ್ರಾಹಕರಿಗೆ ನೀಡಲಾಗಿದೆ.

ಇನ್ನು ವಿಶ್ವಕಪ್ ನಡೆಯುತಿದ್ದು, ಕ್ರಿಕೆಟ್ ಅಭಿಮಾನಿಗಳಿಗಾಗಿ ಜಿಯೋ ಕ್ರಿಕೆಟ್ ಸೀಸನ್ ಎಂಬ ಡೇಟಾ ಪ್ಲಾನ್ ಬಿಡುಗಡೆ ಮಾಡಿದೆ. ಈ ಹೊಸ ಪ್ರಿಪೇಡ್ ರೀಚಾರ್ಜ್ ಪ್ಲಾನ್ ಹೊಸ ಬಳಕೆದಾರರಿಗೆ ರೂ.251 ರ ಬೆಲೆಯಲ್ಲಿ ಲಭ್ಯವಿದೆ. ಪ್ರತಿದಿನ 2 ಜಿಬಿಯಂತೆ 51 ದಿನ 102 ಜಿಬಿ ಸಿಗಲಿದೆ. ಇದರಲ್ಲಿ ವಿಶ್ವಕಪ್ ನ ಎಲ್ಲಾ ಪದ್ಯಗಳ ಲೈವ್ ಸ್ಟ್ರೀಮಿಂಗ್ ಸಹ ನೋಡಬಹುದಾಗಿದೆ.

ಇನ್ನು ಈ ಪ್ಲಾನ್ ಗಳ ಹೊರತಾಗಿ 2ಜಿಬಿ ಪಡೆಯಲು ಬಯಸುವ ಗ್ರಾಹಕರು ಈ ಯೋಜನೆ ಅಡಿಯಲ್ಲಿ 28 ದಿನಗಳ ವ್ಯಾಲಿಡಿಟಿಯೊಂದಿಗೆ ಜಿಯೋ ಬಳಕೆದಾರರು 56ಜಿಬಿ ಡೇಟಾಗಳನ್ನು ಪಡೆದುಕೊಳ್ಳಬಹುದು. ಇನ್ನು ದ್ವನಿ ಕರೆಗಳು ಅನಿಯಮಿತವಾಗಿದ್ದು, ಪ್ರತಿದಿನ 100 ಎಸ್.ಎಮ್.ಎಸ್ ಸೌಲಭ್ಯವಿರುತ್ತದೆ.

ಒಟ್ಟಾರೆ ಜಿಯೋ ತನ್ನ ಗ್ರಾಹಕರನ್ನು ವಿಸ್ತರಿಸುವ ದೃಷ್ಟಿಯಿಂದ ಆನೇಕ ಆಫರ್ ಗಳನ್ನು ನೀಡುತ್ತಿದೆ.