ತಿರುವನಂತಪುರ(ನ.26); ಕೇರಳದ ಸಿಪಿಐ ನೇತೃತ್ವದ ಎನ್‍ಡಿಎಫ್ ಸರ್ಕಾರದಲ್ಲಿ ಜಲ ಸಂಪನ್ಮೂಲ ಸಚಿವರಾಗಿದ್ದ ಮಾಥ್ಯೂ ಟಿ.ಥಾಮಸ್ ಇಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ಅವರು ತಮ್ಮ ರಾಜೀನಾಮೆ ಪತ್ರವನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ರವಾನಿಸಿದ್ದು ರಾಜೀನಾಮೆಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ.

ಎನ್‍ಡಿಎ ನಲ್ಲಿ ಪ್ರಮುಖ ಮಿತ್ರಪಕ್ಷವಾಗಿದ್ದ ಜೆಡಿಎಸ್ ಶುಕ್ರವಾರ ಥಾಮಸ್ ಅವರ ಬದಲಿಗೆ ಚಿತ್ತೂರ್ ಶಾಸಕ ಕೆ.ಕೃಷ್ಣನ್ ಕುಟ್ಟಿ ಅವರನ್ನು ಆಯ್ಕೆ ಮಾಡಲು ನಿರ್ಧರಿಸಿದ ನಂತರ ಈ ಬೆಳವಣಿಗೆ ಕಂಡುಬಂದಿದೆ.