ಬೆಂಗಳೂರು(ಜುಲೈ.12) ಇಂದು ಬೆಂಗಳೂರಿನಲ್ಲಿ ವಿಧಾನ ಪರಿಷತ್‌ನಲ್ಲಿ ಸಚಿವೆ ಜಯಮಾಲ ಯಡವಟ್ಟು ಮಾಡಿಕೊಂಡಿದ್ದಾರೆ. ಇಂದು ವಿಧಾನ ಪರಿಷತ್‌ನಲ್ಲಿಯೂ ಕಲಾಪ ಆರಂಭವಾಗುವ ಮೊದಲು ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಲಾಗಿತ್ತು. ಸಂತಾಪ ಸೂಚಿಸುವ ವೇಳೆ ಗಿರೀಶ್ ಕಾರ್ನಾಡ್‌ ಬದಲು ಗಿರೀಶ್ ಕಾಸರವಳ್ಳಿ ಎಂದು ಜಯಮಾಲಾ ಉಚ್ಛಾರ ಮಾಡಿದರು.

ಸಭೆಯ ವೇಳೆ ಸಭಾ ನಾಯಕಿ ಜಯಮಾಲಾ ಅವರು ಗಿರೀಶ್ ಕಾರ್ನಾಡ್‌ಗೆ ಸಂತಾಪ ಸೂಚನೆ ವೇಳೆ ಗಿರೀಶ್ ಕಾರ್ನಾಡ್ ಎಂದು ಹೇಳುವ ಬದಲು ಗಿರೀಶ್ ಕಾಸರವಳ್ಳಿ ಎಂದು ಉಲ್ಲೇಖಿಸಿ ಕಾನೂರು ಹೆಗ್ಗಡತಿ ಸಿನಿಮಾದಂತಹ ಅದ್ಭುತ ಸಿನಿಮಾ ಕೊಟ್ಟವರು ಗಿರೀಶ್ ಕಾಸರವಳ್ಳಿ ಎಂದು ಹೇಳಿದರು. ಬಳಿಕ ತಪ್ಪನ್ನು ಸರಿ ಪಡಿಸಿಕೊಂಡು ಗಿರೀಶ್ ಕಾಸರಹಳ್ಳಿ ಅಲ್ಲ ಗಿರೀಶ್ ಕಾರ್ನಾಡ್ ಎಂದು ಹೇಳಿದರು.