ನವದೆಹಲಿ(ಜ:09): ಅಸೋಸಿಯೇಟೆಡ್ ಜರ್ನಲ್ ಲಿಮಿಟೆಡ್ ಗೆ ಸಂಬಂಧಿಸಿದಂತೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ಐಟಿ ನೋಟೀಸ್ ಜಾರಿಗೊಳಿಸಲಾಗಿದೆ.

ಆದಾಯ ತೆರಿಗೆ ಇಲಾಖೆಗೆ 100 ಕೋಟಿ ರೂ.ಗಳ ವರಮಾನ ತೆರಿಗೆ ಪಾವತಿಸಬೇಕೆಂಬ ವಿಚಾರವಾಗಿ ಈ ನೋಟೀಸ್ ಜಾರಿಗೊಳಿಸಲಾಗಿದೆ.

ರಾಹುಲ್ ಮತ್ತು ಸೋನಿಯಾ ಘೋಷಿಸಿದ್ದ ವರಮಾನ ವಿವರಗಳ ಕುರಿತು ಆದಾಯ ತೆರಿಗೆ ಇಲಾಖೆ ಮರು ಪರಿಶೀಲಿಸಿ ಹೊಸ ಆದೇಶ ಹೊರಡಿಸಿದೆ,ಆದ್ಧರಿಂದ ಅವರಿಬ್ಬರೂ ಘೋಷಣೆಯಾಗದ ಇನ್ನೂ 100 ಕೋಟಿ ರೂ.ಗಳ ಆದಾಯದ ಬಗ್ಗೆ ಮಾಹಿತಿ ನೀಡಬೇಕು ಎಂದು ಐಟಿ ಮೂಲಗಳು ತಿಳಿಸಿವೆ.