ನವದೆಹಲಿ(ಜೂನ್.03) ದೆಹಲಿಯ ಡಿ.ಕೆ.ಶಿವಕುಮಾರ್ ಅವರ ಮನೆಯ ಮೇಲೆ ಐಟಿ ದಾಳಿ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆಯು ನಡೆದಿದೆ.

ಕೋರ್ಟ್‍ಗೆ ಸಚಿವ ಡಿ.ಕೆ.ಶಿವಕುಮಾರ್, ಇತರೆ ಆರೋಪಿಗಳು ಹಾಜರಾಗಿದ್ದಾರೆ. ಐಟಿ ಪರ ಎಎಸ್‍ಜಿ ಪ್ರಭುಲಿಂಗ್ ನಾವಡ್ಗಿ ವಾದಮಂಡನೆ ಮಾಡಿದ್ದಾರೆ. ದೆಹಲಿಯ ನಿವಾಸಗಳಲ್ಲಿ ಸಿಕ್ಕ ಹಣ ಸಚಿವ ಡಿ.ಕೆ.ಶಿವಕುಮಾರ್‍ಗೆ ಸೇರಿದ್ದಾಗಿದೆ.

3ನೇ ಆರೋಪಿ ಸುನಿಲ್ ಶರ್ಮಾ ಮೂಲಕ ಹಣವನ್ನು ರವಾನೆ ಮಾಡಲಾಗುತ್ತಿತ್ತು ಎನ್ನಲಾಗಿದೆ. ರಾಜೇಂದ್ರ, ಆಂಜನೇಯ ಮೂಲಕ ಹಣವನ್ನು ತಲುಪಿಸುತ್ತದ್ದರು. ಹಣ ಯಾರಿಗೆ ತಲುಪಬೇಕಿತ್ತೋ ಅವರಿಗೆ ತಲುಪಿಸುತ್ತಿದ್ದರು.

ಲಕ್ಷ ಹಣಕ್ಕೆ ಕೆ.ಜಿ. ಎಂದು ಕೋಡ್‍ವರ್ಡ್ ಬಳಕೆ ಮಾಡುತ್ತಿದ್ದರು. ಹವಾಲಾ ಮೂಲಕವೂ ಹಣ ಸಾಗಾಟವಾಗುತ್ತಿತ್ತು. ಶರ್ಮಾ ಟ್ರಾವೆಲ್ಸ್‍ನ ಸುನಿಲ್ ಶರ್ಮಾ ಮನೆಯನ್ನು ಬಳಕೆ ಮಾಡಿಕೊಳ್ಳುತ್ತಿದ್ದರು. ಫ್ಲ್ಯಾಟ್‍ನ 1 ರೂಮ್ ಡಿ.ಕೆ.ಶಿವಕುಮಾರ್ ಬಳಕೆ ಮಾಡುತ್ತಿದ್ದರು ಎಂದು ಸುನಿಲ್ ಶರ್ಮಾ ಹೇಳಿಕೆ ನೀಡಿದ್ದಾರೆ.

ತನಿಖಾ ವಿಭಾಗದ ಖಾಸಗಿ ದೂರು ಆಧರಿಸಿ ವಿಚಾರಣೆ ಮಾಡಿದ್ದು, ದೂರು ದಾಖಲಿಸಲು ಅಧಿಕಾರ ವಾದಮಂಡನೆ ಮಾಡಲಾಗಿದೆ. ವಿಚಾರಣೆಯನ್ನು ನಾಳೆಗೆ ಮುಂದೂಡಿದ ವಿಶೇಷ ನ್ಯಾಯಾಲಯ.