ಬೆಂಗಳೂರು(ಮೇ:29): : ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಸಿಎಂ ಪಟ್ಟ ಬಿಡದೇ ಕಾಡ್ತಿದೆಯಾ? ಹೌದು ಇಂತಹದ್ದೊಂದು ಪ್ರಶ್ನೆ ಆಗಾಗ ಕಾಡುತ್ತಿದೆ. ಇಂದು ಬೆಂಗಳೂರಿನ ಕೆ ಕೆ ಗೆಸ್ಟ್ ಹೌಸ್ ನಲ್ಲಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹಾಗೂ ಕಾಂಗ್ರೆಸ್ ಮುಖಂಡರ ಜೊತೆ ಸಭೆ ನಡೆಸಿ ಹೊರಗೆ ಬಂದ ಸಿದ್ದರಾಮಯ್ಯ ಕಾರನ್ನು ಹತ್ತಲು ಹೋದಾಗ, ಅದು ಮುಖ್ಯಮಂತ್ರಿಗಳ ಕಾರು ಎಂದು ಗೊತ್ತಾಗಿ ಮತ್ತೆ ತಮ್ಮ ಕಾರಿನ ಬಳಿ ಹೋಗಿ ಹತ್ತಿಕೊಂಡರು. ಹೀಗೆ ಪೇಚಿಗೆ ಸಿಲುಕಿದ ಸಿದ್ದರಾಮಯ್ಯ ಕ್ಷಣಕಾಲ ಸಾವರಿಸಿಕೊಂಡು ತಮ್ಮ ಕಾರಿನ ಬಳಿಗೆ ತೆರಳಿದರು. ಮತ್ತೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗ ಬೇಕು ಎಂಬ ಕೂಗು ಕೇಳಿ ಬರುತ್ತಿರುವ ಸಂದರ್ಭದಲ್ಲಿ ಈ ಘಟನೆ ಕಾಕತಾಳಿಯವಾಗಿ ನಡೆದಿದೆ.

ಸಚಿವ ಸ್ಥಾನ ತ್ಯಾಗಕ್ಕೂ ಸಿದ್ದ, ಎಂ.ಸಿ.ಮನಗೂಳಿ

ದೊಡ್ಡವರು ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಬದ್ದನಾಗಿದ್ದೇನೆ. ನಾನು ಸಚಿವ ಸ್ಥಾನ ತ್ಯಾಗ ಮಾಡಲು ಸಿದ್ಧನಿದ್ದೇನೆ. ಸರ್ಕಾರ ಉಳಿಸಿಕೊಳ್ಳಲು ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ದ. ಸಂಪುಟ ವಿಸ್ತರಣೆ,ಪುನಾರಚನೆ ದೊಡ್ಡವರು ನಿರ್ಧಾರ ಮಾಡ್ತಾರೆ. ಮೈತ್ರಿ ನಾಯಕರು ಹಿರಿಯರ ನಿರ್ಣಯಕ್ಕೆ ಬದ್ದರಾಗಿರಬೇಕು. ಸಮ್ಮಿಶ್ರ ಸರ್ಕಾರ 5 ವರ್ಷ ಸುಭದ್ರವಾಗಿರುತ್ತೆ. ಎಂದು ಬೆಂಗಳೂರಲ್ಲಿ ಸಚಿವ ಎಂ.ಸಿ.ಮನಗೂಳಿ ಹೇಳಿದ್ದಾರೆ.