ನ್ಯೂಯಾರ್ಕ್(ಜ:17):ಜಿಮ್ ಯೊಂಗ್ ಕಿಮ್ ಅವರ ರಾಜೀನಾಮೆಯಿಂದ ತೆರವಾಗುತ್ತಿರುವ ವಿಶ್ವ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ಕರ್ನಾಟಕದ ಸೊಸೆ ಇಂದ್ರಾ ನೂಯಿ ಹೆಸರನ್ನು ಅಮೇರಿಕ ಗಂಭೀರವಾಗಿ ಪರಿಗಣಿಸಿದೆ.

ಅಧ್ಯಕ್ಷ ಸ್ಥಾನಕ್ಕೆ ಅಮೇರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹಿರಿಯಮಗಳಾದ ಇವಾಂಕಾ ಅವರ ಹೆಸರು ಸೇರಿದಂತೆ ಅನೇಕರ ಹೆಸರುಗಳು ವಿಶ್ವಬ್ಯಾಂಕ್ ನ ಉನ್ನತ ಹುದ್ದೆಗೆ ಕೇಳಿಬಂದಿದ್ದವು,ಆದರೆ ಇದೀಗ ಸ್ವತಃ ಇವಾಂಕಾ ಅವರೇ ಇಂದ್ರಾ ನೂಯಿ ಪರವಾಗಿ ಲಾಬಿ ಆರಂಭಿಸಿದ್ದಾರೆ ಎಂದು ಅಮೇರಿಕಾದ ಪತ್ರಿಕೋದ್ಯಮ ವರದಿ ಮಾಡಿದೆ.

ಫೆಬ್ರವರಿ 1ರಿಂದ ಅನ್ವಯವಾಗುವಂತೆ ಹಾಲಿ ಅಧ್ಯಕ್ಷ ಜಿಮ್ ಅವರು ಈಗಾಗಲೇ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ.