ಮುಂಬೈ(ಫೆ:07): ತಜ್ಞರ ನಿರೀಕ್ಷೆಯ ಪ್ರಕಾರ ಭಾರತೀಯ ರಿಸರ್ವ್ ಬ್ಯಾಂಕ್ ಗುರುವಾರದಂದು ಬಡ್ಡಿದರದಲ್ಲಿ ಬದಲಾವಣೆ ಮಾಡಲಿದೆ. ಹೀಗಾಗಿ ಬುಧವಾರ ಷೇರುಪೇಟೆಯಲ್ಲಿ ಸಕಾರಾತ್ಮನಕ ವಹಿವಾಟು ನಡೆದು,ಸೂಚ್ಯಂಕಗಳು ಏರಿಕೆ ಕಂಡಿದೆ. ಸತತ ಐದನೇ ವಹಿವಾಟಿನ ಅವಧಿಯಲ್ಲೂ ಸೂಚ್ಯಂಕಗಳು ಏರಿಕೆ ಕಂಡಿದ್ದು,ತಿಂಗಳ ಗರಿಷ್ಠ ಮಟ್ಟದಲ್ಲಿ ವಹಿವಾಟು ಅಂತ್ಯವಾಗಿದೆ.

ಮುಂಬೈ ಷೇರುಪೇಟೆಯ ಬಿ ಎಸ್ ಇ (ಬಾಂಬೆ ಸ್ಟಾಕ್ ಎಕ್ಸ್ಚೇಂಜ್) 359 ಅಂಶ ಜಿಗಿತ ಕಂಡಿದ್ದು,36,975 ಅಂಶಗಳಲ್ಲಿ ದಿನದ ವಹಿವಾಟು ಅಂತ್ಯಕಂಡಿದೆ. ರಾಷ್ಟ್ರೀಯ ಷೇರುಪೇಟೆಯ ಸೂಚ್ಯಂಕ ನಿಫ್ಟಿ 128 ರಷ್ಟು ಅಂಶ ಹೆಚ್ಚಾಗಿ 11 ಸಾವಿರದ ಗಡಿ ದಾಟಿದೆ ಎನ್ನಲಾಗಿದೆ.

ಆರ್ ಬಿ ಐ ಸಭೆಯ ಹಿನ್ನಲೆಯಲ್ಲಿ ದೇಶೀಯ ಹಾಗೂ ವಿದೇಶೀಯ ಹೂಡಿಕೆದಾರರು ಉತ್ತಮ ವಹಿವಾಟು ನಡೆಸಿದರು,ಇದರಿಂದ ಸೂಚ್ಯಂಕ ಏರಿಕೆ ಕಂಡಿದೆ ಎಂದು ಮೂಲಗಳು ತಿಳಿಸಿವೆ. ಬ್ಯಾಂಕಿಂಗ್,ಔಷಧ ಹಾಗೂ ಐಟಿ ಷೇರುಗಳು ಶೇ.2 ರ ವರೆಗೆ ಏರಿಕೆಯಾಗಿದೆ.

ಸಾರ್ವತ್ರಿಕ ಚುನಾವಣೆ ಇರುವುದರಿಂದ ಫಾರಿನ್ ಇನ್ಸಿಟಿಟ್ಯೂಷನಲ್ ಇನ್ವೆಸ್ಟರ್(ಎಫ್ಐಐ) ಹಾಗೂ ಫಾರಿನ್ ಡೈರೆಕ್ಟ್ ಇನ್ವೆಸ್ಟ್ಮೆಂಟ್(ಎಫ್ ಡಿ ಐ) ಭಾರತೀಯ ಮಾರುಕಟ್ಟೆಗಳಲ್ಲಿ ಹೆಚ್ಚಿನ ಪ್ರಮಾಣದ ಹೂಡಿಕೆ ಮಾಡುವುದಿಲ್ಲ,2019 ರ ದ್ವಿತೀಯಾರ್ಧದಲ್ಲಿ ಚಾಲ್ತಿಯ ಕೊರತೆ ಸುಧಾರಿಸುವುದು ಕಷ್ಟವಾಗಲಿದೆ ಇದರಿಂದ ಭಾರತದ ರೂಪಾಯಿ ಮೌಲ್ಯ 98ರ ವರೆಗೂ ಕುಸಿಯಬಹುದು ಎಂದು ತಿಳಿದುಬಂದಿದೆ.