ಗುವಾಹಟಿ(ಡಿ.24): ಭಾರತದ ಅತೀ ಉದ್ದದ ಬೋಗಿವೆಲ್ ಸೇತುವೆ ನಿರ್ಮಾಣ ಕಾರ್ಯ ಅಂತಿಮವಾಗಿದ್ದು, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಮಂಗಳವಾರ ಈ ಸೇತುವೆ ಅನಾವರಣಗೊಳಿಸಲಿದ್ದಾರೆ. ಅಸ್ಸಾಂ ಮತ್ತು ಅರುಣಾಚಲ ಪ್ರದೇಶದ ನಡುವಿನ 10 ಗಂಟೆಗಳ ಪ್ರಯಾಣದ ಸಮಯವನ್ನು ಇದು ಕಡಿಮೆಗೊಳಿಸುತ್ತದೆ.

2002 ರಲ್ಲಿ ಬೋಗಿಬೆಲ್ ಸೇತುವೆಯ ನಿರ್ಮಾಣ ಕಾರ್ಯವನ್ನು ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಉದ್ಘಾಟಿಸಿದ್ದರು. 1997 ರಲ್ಲಿ ಮಾಜಿ ಪ್ರಧಾನ ಮಂತ್ರಿ ಎಚ್.ಡಿ.ದೇವೇಗೌಡರು ಇದರ ಅಡಿಗಲ್ಲು ಹಾಕಿದ್ದರು

ಸೇತುವೆಯ ಮೇಲಿನ ಕೆಲಸವು ಪ್ರಾರಂಭವಾದ ಹದಿನಾರು ವರ್ಷಗಳ ನಂತರ, ಪೂರ್ಣಗೊಂಡ ಸೇತುವೆಯನ್ನು ನೋಡಲು ಶ್ರೀ ಗೋಗೋಯ್ ಆಗಮಿಸಿ ಸೇತುವೆಯನ್ನು ವೀಕ್ಷಿಸಿದ್ದಾರೆ.

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ನಿರ್ಮಾಣ ಕಾರ್ಯವನ್ನು ಉದ್ಘಾಟಿಸಲು ಇಲ್ಲಿಗೆ ಬಂದಾಗ ನಾವು ಶಾಲೆಯಲ್ಲಿದ್ದೆವು. ಈ ಸೇತುವೆಯು ನಮ್ಮ ಕನಸಾಗಿದೆ, ಇದು ಅನೇಕ ಪ್ರತಿಭಟನೆಗಳ, ಹೋರಾಟದ ಫಲಿತಾಂಶ ಹಾಗೂ ಈಶಾನ್ಯ ಭಾಗಕ್ಕೆ ಪ್ರಮುಖ ವರ್ಧಕವಾಗಿದೆ ಎಂದು ಗೊಗೋಯ್ ಹೇಳಿದ್ದಾರೆ.

ಇಂಜಿನಿಯರಿಂಗ್ ಮಾರ್ವೆಲ್ ಎಂದು ಪ್ರಶಂಸಿಸಲ್ಪಟ್ಟರುವ ಬೋಗಿವೆಲ್ ಸೇತುವೆಯು ಈಶಾನ್ಯ ಗಡಿಯ ರಕ್ಷಣೆಗೆ ಪ್ರಮುಖ ಸೇತುವೆಯಾಗಿದೆ. ಇದು ಹೆಚ್ಚಿನ ಮಳೆ ಬೀಳುವ ಮತ್ತು ಭೂಕಂಪ ವಲಯದ ಪ್ರದೇಶವಾಗಿರುವ ಕಾರಣ ಬ್ರಹ್ಮಪುತ್ರಾ ನದಿಗೆ ಬ್ರಿಡ್ಜ್ ಮಾಡುವುದು ಕಷ್ಟದಾಯಕವಾಗಿತ್ತು.

ಇದು ಹಲವು ವಿಧಗಳಲ್ಲಿ ವಿಶಿಷ್ಟವಾದ ಸೇತುವೆಯಾಗಿದ್ದು. ದೇಶದಲ್ಲೆ ಅತಿ ಉದ್ದವಾದ ಸೇತುವೆಯಾಗಿದೆ ಎಂದು ಪ್ರಣವ್ ಜ್ಯೋತಿ ಶರ್ಮ ತಿಳಿಸಿದ್ದಾರೆ.

ಭಾರತೀಯ ರೈಲ್ವೇಯಿಂದ ನಿರ್ಮಿಸಲ್ಪಟ್ಟ ಡಬಲ್ ಡೆಕ್ಕರ್ ಸೇತುವೆಯಾಗಿದ್ದು, ಕೆಳ ಡೆಕ್ನಲ್ಲಿ ಎರಡು ರೈಲ್ವೆ ಮಾರ್ಗಗಳನ್ನು ಮತ್ತು ಮೇಲ್ಭಾಗದಲ್ಲಿ ಮೂರು ರಸ್ತೆಗಳನ್ನು ಹೊಂದಿದೆ.

ಭಾರಿ ಮಿಲಿಟರಿ ಟ್ಯಾಂಕ್‍ಗಳ ಚಲನೆಯನ್ನು ತಡೆದುಕೊಳ್ಳುವಷ್ಟು ಪ್ರಬಲವಾದ ಸೇತುವೆ ಇದಾಗಿದೆ. 21 ವರ್ಷಗಳಿಂದ ಅಸ್ಸಾಂ ಮತ್ತು ಅರುಣಾಚಲ ಪ್ರದೇಶದ ನಿವಾಸಿಗಳು ಸೇತುವೆಯ ನಿರ್ಮಾಣ ಕಾರ್ಯಕ್ಕಾಗಿ ಕಾಯುತ್ತಿದ್ದು, ಇಂದು ಅವರ ಕನಸ್ಸು ನನಸಾಗಿದೆ.