ಶ್ರೀನಗರ:(ಫೆ13): ಇಬ್ಬರು ಉಗ್ರರು ಭಾರತೀಯ ಸೇನೆಯ ಎನ್ಕೌಂಟರ್ ದಾಳಿಗೆ ಬಲಿಯಾಗಿದ್ದಾರೆ. ಈ ಘಟನೆ ನಡೆದಿದ್ದು ಕಾಶ್ಮೀರದ ಬದಗಾಮ್ ಜಿಲ್ಲೆಯ ಗೋಪಾಲಪೋರಾ ಪ್ರದೇಶದಲ್ಲಿ ಉಗ್ರರಿರುವ ಮಾಹಿತಿ ತಿಳಿದು ಬಂದ ಕೂಡಲೇ ಸಿ ಆರ್ ಪಿ ಎಫ್ ಯೋಧರು ದಾಳಿಯನ್ನು ನಡೆಸಿದ್ದಾರೆ.

ಸಿ ಆರ್ ಪಿ ಎಫ್ ಯೋಧರು ಉಗ್ರರಿರುವ ಸ್ಥಳಕ್ಕೆ ಧಾವಿಸುವ ವೇಳೆ ಉಗ್ರರು ಯೋಧರ ಮೇಲೆಯೇ ಗುಂಡಿನ ದಾಳಿ ನಡೆಸಿದ್ದು, ಯೋಧರು ಪ್ರತಿ ದಾಳಿಯನ್ನು ನಡೆಸುವುದರ ಮೂಲಕ ಇಬ್ಬರು ಉಗ್ರರನ್ನು ಹತ್ಯೆ ಗೈವುದರ ಮೂಲಕ ಭಾರತೀಯ ಯೋಧರು ತಮ್ಮ ಧೀರ ತನವನ್ನು ಮೆರೆದಿದ್ದಾರೆ.

ಇನ್ನು ಮತ್ತಷ್ಟು ಉಗ್ರರರು ಇದ್ದಾರೆಂಬ ಶಂಕೆ ವ್ಯಕ್ತವಾಗಿದ್ದು, ಯೋಧರ ಶೋಧನಾ ಕಾರ್ಯ ಮುಂದುವರೆದಿದೆ.