ಸಿಡ್ನಿ(ಜ:12): ಸಿಡ್ನಿಯಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಸೋಲನ್ನನುಭವಿಸಿದೆ. ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾ ಉತ್ತಮ ರನ್ ಕಲೆಹಾಕುವಲ್ಲಿ ಯಶಸ್ವಿಯಾಯಿತು. ಹ್ಯಾಂಡ್ಸ್ ಕೊಂಬ್ ಮತ್ತು ಖವಾಜ ಉತ್ತಮ ಪ್ರದರ್ಶನ ನೀಡಿದರು ಆಸ್ಟ್ರೇಲಿಯಾ 5 ವಿಕೆಟ್ ನಷ್ಟಕ್ಕೆ 288 ರನ್ ಕಲೆ ಹಾಕಿತು.

ಗೆಲುವಿನ ಭರವಸೆಯಲ್ಲಿ ಕ್ರೀಸ್ ಗೆ ಇಳಿದ ಭಾರತ ತಂಡದ ಆಟಗಾರರು,ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾದರು,ಮೊದಲ 10 ರನ್ ಗಳಿಸುವಷ್ಟರಲ್ಲಿ 3 ವಿಕೆಟ್ ಕಳೆದುಕೊಂಡ ಭಾರತ ತಂಡಕ್ಕೆ ರೋಶಿತ್ ಶರ್ಮ ಮತ್ತು ಮಹೇಂದ್ರಸಿಂಗ್ ಧೋನಿ ಆಸರೆಯಾದರು. 133 ರನ್ ಗಳಿಸಿದ ರೋಹಿತ್ ಸ್ಟೋಯಿನಿಸ್ ಗೆ ವಿಕೆಟ್ ಒಪ್ಪಿಸಿದರೆ,ಧೋನಿ ಎಲ್ ಬಿ ಡಬ್ಲ್ಯೂ ಆಗುವ ಮೂಲಕ ಬೆಹ್ರೆಂಡಾರ್ಫ್ ಗೆ ವಿಕೆಟ್ ಒಪ್ಪಿಸಿದರು,ಕೊನೆಯದಾಗಿ 50 ಓವರ್ ಮುಕ್ತಾಯದ ವೇಳೆಗೆ ಭಾರತ ತಂಡ 254 ರನ್ ಗಳಿಸಲಷ್ಟೇ ಶಕ್ತವಾಯಿತು.