ವಾಷಿಂಗ್ಟನ್,(ಫೆ.27): ಯುದ್ದವನ್ನು ಕೈಬಿಟ್ಟು ಉಗ್ರರ ವಿರುದ್ಧ ಕ್ರಮಕೈಗೊಳ್ಳಿ ಎಂದು ವಿಶ್ವಸಂಸ್ಥೆ ಪಾಕಿಸ್ತಾನಕ್ಕೆ ಆದೇಶಿಸಿದೆ.

ಭಯೋತ್ಪಾದಕ ಕೃತ್ಯಗಳನ್ನು ನಡೆಸುತ್ತಿರುವ ಉಗ್ರ ಸಂಘಟನೆಗಳ ವಿರುದ್ಧ ಸರಿಯಾದ ಕ್ರಮ ಕೈಗೊಳ್ಳುವ ಮೂಲಕ ಉಗ್ರರ ನೆರವಿಗೆ ನಿಲ್ಲದೇ ಪ್ರಾಮಾಣಿಕತೆ ತೋರಿ ಎಂದು ಪಾಕ್‍ಗೆ ವಿಶ್ವಸಂಸ್ಥೆ ಸೂಚಿಸಿದೆ.

ವಿಶ್ವಸಂಸ್ಥೆಯ ಕಾರ್ಯದರ್ಶಿ ಮೈಕ್ ಪಾಂಪಿಯೊ ಅವರು ಪಾಕಿಸ್ತಾನದ ವಿದೇಶಾಂಗ ಸಚಿವ ಷಾ-ಮೊಹಮ್ಮದ್ ಖುರೇಷಿ ಅವರಿಗೆ ಕರೆ ಮಾಡಿ ದಾಳಿಯನ್ನು ನಿಲ್ಲಿಸಿ ಎಂದು ಹೇಳಿದ್ದಾರೆ. ಜೊತೆಗೆ, ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಕರೆ ಮಾಡಿ, ಶಾಂತಿ ಮತ್ತು ಭದ್ರತೆ ಕಾಪಾಡುವಂತೆ ಸಲಹೆ ನೀಡಿದ್ದಾರೆ.

ಪಾಕ್ ಉಗ್ರರ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಕಾಯುತ್ತಿದ್ದ ಭಾರತೀಯ ಸೇನೆ ಮಂಗಳವಾರ ಅಂದರೆ ಫೆ.26 ರಂದು ಬಾಲಕೋಟ್‍ನಲ್ಲಿರುವ ಜೈಷ್ ಸಂಘಟನೆಯ ತರಬೇತಿ ತಾಣದ ಮೇಲೆ ವಾಯುದಾಳಿ ನಡೆಸಿತ್ತು. ಭಾರತೀಯ ಯೋಧರು ಹೆಚ್ಚಿನ ಸಂಖ್ಯೆಯ ಉಗ್ರರನ್ನು ಹೊಡೆದುರುಳಿಸಿದ್ದರು.