ಬೆಂಗಳೂರು(ಮಾ:18):ಲೋಕಸಭಾ ಚುನಾವಣೆಯ ಕುರಿತು ಸುಮಲತಾ ಅಂಬರೀಶ್ ಸ್ಪರ್ಧಿಸುವ ಅಧಿಕೃತ ಘೋಷಣೆಗಾಗಿ ಪತ್ರಿಕಾ ಗೋಷ್ಠಿ ಕರೆದಿದ್ದು ದರ್ಶನ್, ಯಶ್ ಇನ್ನು ಕೆಲವರು ಭಾಗವಹಿಸಿದ್ದರು.ದರ್ಶನ್ ಮಾತನಾಡಿ ಅಂಬರೀಶ್ ಅಪ್ಪಾಜಿ ನಮ್ಮನ್ನೆಲ್ಲ ಬೆಳೆಸಿದವರು,ನಾವು ಅವರ ಕುಟುಂಬದವರಾಗಿ ಈ ಚುನಾವಣೆಯಲ್ಲಿ ಸುಮಲತಾ ಅವರಿಗೆ ಬೆಂಬಲಿಸುತ್ತಿದ್ದೇವೆ.ಸ್ಟಾರ್ ಗಳು ಅಂತ ಈ ಕೆಲಸ ಮಾಡುತ್ತಿಲ್ಲ.ಹಿಂದೆಯೂ ಅಂಬರೀಶ್ ಅವರ ಮುಳು ಎಂ ಎಲ್ ಎ, ಒಂದು ಎಂ ಪಿ ಚುನಾವಣೆಗೆ ಪ್ರಚಾರಕ್ಕೆ ಹೋಗಿದ್ದೆ.ನನಗೆ ಯಾವ ಪಕ್ಷವೂ ಮುಖ್ಯವಲ್ಲ,ವ್ಯಕ್ತಿ ಮುಖ್ಯ.ಪ್ರಜ್ವಲ್ ನನ್ನ ಸ್ನೇಹಿತ,ಆತ ಕರೆದರೆ ಹಾಸನಕ್ಕೂ ಹೋಗುವೆ ಎಂದಿದ್ದಾರೆ.

ಪತ್ರಕರ್ತರು ಚುನಾವಣೆ ಮುಗಿಯುವವರೆಗೂ ಇರುತ್ತಿರೋ ಅಥವಾ ಗೆಸ್ಟ್ ಅಪಿಯರೆನ್ಸೋ ಅಂದಿದ್ದಕ್ಕೆ,ಫುಲ್ ಫಿಲ್ಮ್ ಮುಗಿಸುತ್ತೇವೆ ಎಂದು ನಕ್ಕರು.ಒಟ್ಟಿನಲ್ಲಿ ಸಿನಿಮಾ ನಟರ ಪ್ರವೇಶದಿಂದ ಮಂಡ್ಯ ಕ್ಷೇತ್ರ ಇನ್ನಷ್ಟು ರಂಗು ಹೆಚ್ಚಿಸಿಕೊಂಡಿದೆ.