ತುಮಕೂರು:( ಜ23): ನಡೆದಾಡುವ ದೇವರು ನಿನ್ನೆ ಮರೆಯಾಗಿ ಹೋಗಿದ್ದಾರೆ. ಆದರೆ ಅವರ ನಿಷ್ಠೆ ಶ್ರಮ ಭಕ್ತಿ ಎಂದೆಂದಿಗೂ ಅಮರ ಅದು ಮರೆಯಲಾಗದಂತದ್ದು.

ಶಿವಕುಮಾರ ಸ್ವಾಮೀಜಿಯವರು ಮಠದ ಅಧಿಕಾರವನ್ನು 2011ರಲ್ಲಿ ಹಸ್ತಾಂತರ ಮಾಡಿದ್ದರು ಅಂದರೆ ಉಯಿಲು ಬರೆದಿದ್ದರು. ಅಂದಿನಿಂದ ಸಿದ್ದಲಿಂಗ ಸ್ವಾಮೀಜಿ ಮಠದ ಜವಾಬ್ದಾರಿಯನ್ನು ಹೊತ್ತಿದ್ದರು.

ಈ ಕಾರ್ಯ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರ ಸಮ್ಮುಖದಲ್ಲಿ ನಡೆಸಲಾಗಿತ್ತು. ಈ ವೇಳೆ ಶ್ರೀಗಳು ಹೇಳಿದ ಮಾತು ನಿಜಕ್ಕೂ ಅದ್ಭುತ. ಅಂದರೆ ಭಗವಂತನ ಸೃಷ್ಟಿಯಲ್ಲಿ ಮನುಷ್ಯನಿಗೆ ಶ್ರೇಷ್ಠ ಸ್ಥಾನವಿದೆ ಅದನ್ನು ತಿಳಿದು ನಡೆದರೆ ಸಮಾಜದಲ್ಲಿ ಶಾಂತಿ ನೆಲೆಸುತ್ತದೆ. ಇದಕ್ಕೆ ಧರ್ಮಪೀಠಗಳು ನೆರವಾಗಬೇಕು ಎಂದಿದ್ದರು. ಜೊತೆಗೆ ಶಿಕ್ಷಣ ನೀಡುವುದರಿಂದ ಬದಲಾವಣೆ ಸಾಧ್ಯ ಎಂದಿದ್ದರು.

ಆಗ ಶ್ರೀಗಳುˌ ಸಿದ್ದಲಿಂಗ ಸ್ವಾಮೀಜಿಗಳು ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸತ್ತಾರೆˌ ಎಂಬ ನಂಬಿಕೆ ನನ್ನಲ್ಲಿದೆ ಎಂದು ನುಡಿದಿದ್ದರು. ಆದರೆ ಆಗ ಕಾನೂನು ರೀತಿಯಲ್ಲಿ ಅಧಿಕಾರ ಸ್ವೀಕರಿಸಿದ್ದ ಸಿದ್ದಲಿಂಗ ಸ್ವಾಮೀಜಿ ಈಗ ಧಾರ್ಮಿಕ ವಿಧಿಯ ಮೂಲಕ ಮಠದ ಪೂರ್ಣ ಅಧಿಕಾರವನ್ನು ಪಡೆದಿದ್ದಾರೆ.