ಬೆಂಗಳೂರು(ಜೂನ್.10) ಬೆಂಗಳೂರಿನಲ್ಲಿರುವ IMA ಜ್ಯೂವೆಲರಿ ಮಾಲೀಕ ಮನ್ಸೂರ್ ಅಲಿಖಾನ್ ನಾಪತ್ತೆಯಾಗಿದ್ದಾರೆ. ನಾಪತ್ತೆಯಾದ ಬಳಿಕ ಅಚ್ಚರಿಯ ಆಡಿಯೋ ಒಂದನ್ನು ಬಿಡುಗಡೆಗೊಳಿಸಿದ್ದಾರೆ.

ನನ್ನ ಬಳಿ 500 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಇದೆ, ಅದನ್ನು ವಶಕ್ಕೆ ತೆಗೆದುಕೊಂಡು ಹೂಡಿಕೆದಾರರಿಗೆ ಹಂಚಿ ಎಂದು ಹೇಳಿರುವಂತಹ ಆಡಿಯೋವನ್ನು ಮನ್ಸೂರ್ ಕಳುಹಿಸಿದ್ದು, ಬಿಡಿಎ ಕುಮಾರ್ ಬಳಿ ನನ್ನ 5 ಕೋಟಿ ರೂಪಾಯಿ ಇದೆ, ಶಿವಾಜಿನಗರದ ಶಾಸಕರ ಬಳಿ ನನಗೆ ಸೇರಿದ 400 ಕೋಟಿ ರೂಪಾಯಿ ಇದೆ. ಎಲ್ಲವನ್ನೂ ವಶಕ್ಕೆ ಪಡೆದುಕೊಂಡು ಹೂಡಿಕೆದಾರರಿಗೆ ಕೊಟ್ಟುಬಿಡಿ ಎಂಬ ಆಡಿರೋ ಬಿಡುಗಡೆ ಮಾಡಿದ್ದಾರೆ.

ನನ್ನ ಹೆಸರಿನಲ್ಲಿರುವ ಬೆಂಗಳೂರಿನ 500 ಕೋಟಿ ಆಸ್ತಿಯನ್ನು ಮಾರಿಬಿಡಿ, ನನ್ನ ಜೀವನವನ್ನು ಇಲ್ಲಿಗೆ ಕೊನೆಗೊಳಿಸುತ್ತೇನೆ ಎಂದು IMA ಜ್ಯೂವೆಲರಿ ಮಾಲೀಕ ಮನ್ಸೂರ್ ಅಲಿಖಾನ್ ಮಾತನಾಡಿರುವ ಆತ್ಮಹತ್ಯೆ ಆಡಿಯೋ ವೈರಲ್ ಆಗಿದೆ. ಐದು ನಿಮಿಷ ಮಾತನಾಡಿರುವ ಜ್ಯುವೆಲರಿ ಮಾಲೀಕ ಮನ್ಸೂರ್.

ಆಡಿಯೋ ವೈರಲ್ ಆಗ್ತಿದ್ದಂತೆ ಪೊಲೀಸರು ಮನ್ಸೂರ್ ಅಲಿಖಾನ್ ನ ಹುಡುಕಾಟದಲ್ಲಿದ್ದಾರೆ. ಮನ್ಸೂರ್ ಅಲಿಖಾನ್ ವಿದೇಶಕ್ಕೆ ಪರಾರಿ ಆಗಿರುವ ಶಂಕೆ ಇದ್ದು ಏರ್ ಪೋರ್ಟ್‍ನಲ್ಲಿ ಸಿಸಿಟಿವಿ ದೃಶ್ಯಗಳನ್ನು ಮತ್ತು ಪ್ರಯಾಣಿಕರ ಪಟ್ಟಿಯನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಬೆಂಗಳೂರು, ಮುಂಬೈ, ಚೆನೈ, ಕೋಲ್ಕತ್ತಾದಲ್ಲಿ ಮನ್ಸೂರ್ ಅಲಿಖಾನ್ ನ ಹುಡುಕಾಟ ನಡೆಸಿದ್ದಾರೆ.

ಈ ಸುದ್ದಿ ತಿಳಿದ ಹೂಡಿಕೆದಾರರು ಐಎಮ್ ಎ ಜ್ಯೂವೆಲರಿ ಮುಂದೆ ಪ್ರತಿಭಟನೆ ಮಾಡುತ್ತಿದ್ದಾರೆ. ಸಾವಿರಕ್ಕೂ ಅಧಿಕ ಜನರು ಇದಕ್ಕೆ ಬಂಡವಾಳವನ್ನು ಹೂಡಿ, ಮೋಸವನ್ನು ಹೋಗಿದ್ದಾರೆ. ಜ್ಯೂವೆಲರಿ ಮಾಲಿಕ ಮನ್ಸೂರ್ ಅಲಿಖಾನ್ ವಿರುದ್ಧ ಹೂಡಿಕೆದಾರರು ಕಂಪ್ಲೆಂಟ್ ಕೂಡ ನೀಡುತ್ತಿದ್ದಾರೆ.