ಬೆಂಗಳೂರು(ಜೂನ್.11) ಬೆಂಗಳೂರಿನ ಐಎಂಎ ಜ್ಯುವೆಲರಿ ಮಾಲಿಕ ಮನ್ಸೂರ್ ಅಲಿಖಾನ್ ವಂಚಸಿ ನಾಪತ್ತೆಯಾದ ಪ್ರಕರಣವು ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ.

ರಾಜ್ಯದ ಹಲವೆಡೆ ಸಾವಿರಕ್ಕೂ ಹೆಚ್ಚು ಎಕರೆ ಜಾಗವನ್ನು ಬಡವರ ದುಡ್ಡಲ್ಲಿ ಖರೀದಿಸಿದ್ದಾರೆ ಮನ್ಸೂರ್. ಚಿಕ್ಕಬಳ್ಳಾಪುರದಲ್ಲಿ 2017ರಲ್ಲೇ 150 ಎಕರೆ ಜಾಗ ಖರೀದಿಸಿದ್ದಾರೆ. ರಾಮನಗರ ಬಳಿ 150 ಎಕರೆ ಖರೀದಿಸಿ ವಂಚಿಸಿದ್ದಾರೆ. ಕೊಡಗಿನಲ್ಲಿ 50 ಎಕರೆ ಜಾಗದಲ್ಲಿ ವಿಲ್ಲಾ ನಿರ್ಮಾಣಕ್ಕೂ ಪ್ಲಾನ್ ಮಾಡಲಾಗಿತ್ತು ಎನ್ನಲಾಗಿದೆ.

ಮನ್ಸೂರ್ ರ ರಿಯಲ್ ಎಸ್ಟೇಟ್ ವ್ಯವಹಾರಗಳನ್ನು ಅವರ ಸೋದರನ ಮಕ್ಕಳಾದ ನದೀಂ,ವಸೀಂ ಎನ್ನುವವರು ನೋಡಿಕೊಳ್ಳುತ್ತಿದ್ದರು. ಶಿವಾಜಿನಗರ ಒಂದರಲ್ಲೇ 90 ಕಟ್ಟಡವನ್ನು ಮನ್ಸೂರ್ ಹೊಂದಿದ್ದಾರೆ. ಬಡಜನರ ಹಣದಿಂದ ಶೋಕಿ ಮಾಡುತ್ತಿದ್ದ ಮನ್ಸೂರ್.

ರಾಜ್ಯದಲ್ಲಿ 13 ಪ್ರಮುಖ ಕಂಪನಿಗಳಲ್ಲಿ ವ್ಯವಹಾರವನ್ನು ನಡೆಸುತ್ತಿದ್ದ ಮನ್ಸೂರ್. ಐಎಂಎ ಜ್ಯುವೆಲ್ಸ್ ಮತ್ತು ಐಎಂಎ ಗೋಲ್ಡ್ 2 ಕಂಪನಿಗಳ ಹೆಸರಿನಲ್ಲಿ ಗೋಲ್ಡ್ ಬ್ಯುಸಿನೆಸ್. ಐಎಂಎಐಪಿ ಬಿಲಿಯನ್ ಮತ್ತು ಟ್ರೇಡಿಂಗ್ ಎಲ್‍ಎಲ್ ಪಿ, ಐಎಂ ಅಡ್ವೈಸರಿ ಪ್ರೈ.ಲಿಮಿಟೆಡ್, ಐಎಂಎ ಬಿಲ್ಡರ್ಸ್, ಐಎಂಎ ಇನ್ ಫ್ರಾಸ್ಟ್ರಕ್ಚರ್ ಆಂಡ್ ಡೆವಲಪರ್ಸ್, ಐಎಂಎ ಪಬ್ಲಿಷರ್ಸ್ ಪ್ರೈ.ಲಿಮಿಟೆಡ್, ಐಎಂಎ ಅಕಾಡೆಮಿ, ಮಲ್ಬೆರಿ ಗ್ರೀನ್ಸ್, ಫ್ರಂಟ್ ಲೈನ್ ಆಸ್ಪತ್ರೆ, ಫ್ರಂಟ್ ಲೈನ್ ಫಾರ್ಮ್ ಹೀಗೆ ಹಲವಾರು ಕಂಪನಿಗಳನ್ನು ನಡೆಸಿ ವಂಚನೆಯನ್ನು ಮಾಡಿದ್ದಾರೆ ಮನ್ಸೂರ್ ಅಲಿಖಾನ್.