ಬೆಂಗಳೂರು(ಜೂನ್.13) IMA ಕಂಪನಿಯ ಮಾಲೀಕ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಶಿವಾಜಿನಗರದಲ್ಲಿರುವ ಐಎಂಎ ಕೇಂದ್ರ ಕಚೇರಿಯನ್ನು ಸೀಜ್ ಮಾಡಲಾಗಿದೆ.

IMA ಕಂಪನಿಯ ಮಾಲೀಕನ ಮನ್ಸೂರ್ ಮೇಲೆ ಹೂಡಿಕೆದಾರರ ವಂಚನೆ ದೂರು ಹಿನ್ನೆಯಲ್ಲಿ ಸರ್ಕಾರವು ತನಿಖೆಯನ್ನು SIT ಅಧಿಕಾರಿಗಳಿಗೆ ನೀಡಿದೆ.

ಈ ಹಿನ್ನೆಲೆಯಲ್ಲಿ ಮನ್ಸೂರ್ ಖಾನ್ ರ ಹುಡುಕಾಟದಲ್ಲಿರುವ SIT ಅಧಿಕಾರಿಗಳು IMA ಕೇಂದ್ರ ಕಚೇರಿಗೆ ಅಧಿಕೃತವಾಗಿ ವಂಚನೆ ಪ್ರಕರಣ ತನಿಖಾ ಹಂತದಲ್ಲಿರುವ ಹಿನ್ನೆಲೆಯಲ್ಲಿ ಬೀಗದ ಮುದ್ರೆಯನ್ನು ಹಾಕಿದ್ದಾರೆ.