ನವದೆಹಲಿ: ನರೇಂದ್ರ ಮೋದಿ ಸರಕಾರವು 20ಲಕ್ಷ ಜನರಿಗೆ ಉಚಿತ ಲ್ಯಾಪ್ ಟ್ಯಾಪ್ ಗಳನ್ನು ವಿತರಿಸುತ್ತಿದೆ ಎಂಬ ಸುಳ್ಳು ಮಾಹಿತಿಗಳನ್ನು ವೆಬ್ ಸೈಟ್ ಮೂಲಕ ಹರಿಬಿಟ್ಟು ವಂಚಿಸುತ್ತಿದ ಐಐಟಿ ಪದವೀಧರರನ್ನು ಪೊಲೀಸರು ಬಂಧಿಸಿದ್ದಾರೆ.

ಶಂಕಿತ ರಾಕೇಶ್ ಜಾಂಗಿಡ್ (23) ಎಂಬ ವಿದ್ಯಾರ್ಥಿ ನಕಲಿ ಜಾಹಿರಾತುಗಳನ್ನು ನೀಡಿ ವ್ಯಕ್ತಿಗಳ ವೈಯಕ್ತಿಕ ಡೇಟಾವನ್ನು ಸಂಗ್ರಹಿಸುತ್ತಿದ್ದ ಎಂದು ಸೈಬರ್ ಅಪರಾಧ ಘಟಕದದ ಪೊಲೀಸ್ ಆಯುಕ್ತ ಅನೀಶ್ ರಾಯ್ ಹೇಳಿದ್ದಾರೆ.

ವೆಬ್ ಸೈಟ್ ಗೆ ಸುಮಾರು 1.52 ಮಿಲಿಯನ್ ವಿಕ್ಷಣೆಯಾಗಿದ್ದು, ಜಾಹಿರಾತುಗಳ ಮೇಲೆ 68 ಸಾವಿರ ಬಾರಿ ಕ್ಲಿಕ್ ಆಗಿದೆ ಎಂದು ಡಿಸಿಪಿ ಹೇಳಿದ್ದಾರೆ.

ಇನ್ನು ಈ ವೆಬ್‍ಸೈಟ್ ಲಿಂಕ್ ಗಳನ್ನು ವ್ಯಾಟ್ ಆಪ್ ನಲ್ಲಿ ಪ್ರಚಾರ ಮಾಡಿದ್ದಾರೆ. ಇದು ಸಾಮಾಜಿಕ ಮಾದ್ಯಮಗಳ ಮೂಲಕ ಫೇಮಸ್ ಆಗಿದೆ ಇದನ್ನು ನೋಡಿದ ಜನರು ತಮ್ಮ ವೈಯಕ್ತಿಕ ಮಾಹಿತಿಗಳನ್ನ ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರು ಈ ನಕಲಿ ಯೊಜನೆ ಕುರಿತು ಮಾಹಿತಿಗಳನ್ನು ಸಂಗ್ರಹಿಸುತ್ತಿದು, ವೆಬ್‍ಸೈಟ್ ಮಾಲಿಕರು ಮತ್ತು ಅದಕ್ಕೆ ಸಂಬಂಧಿಸಿದ ಶಂಕಿತರ ಹುಡುಕಾಟಕ್ಕೆ ಬಲೆ ಬೀಸಿದ್ದಾರೆ. ಉಚಿತ ಲ್ಯಾಪ್‍ಟ್ಯಾಪ್ ವಿತರಣೆ ಎಂಬ ಜಾಹಿರಾತು ನೀಡುವ ಮೂಲಕ ವೆಬ್ ಸೈಟ್ ಗೆ ಜನರನ್ನು ಅಹ್ವಾನಿಸಿ ಹಣವನ್ನು ಗಳಿಸುವ ಸಂಚನ್ನು ಈ ಗುಂಪು ಹೊಂದಿದೆ. ಇವರ ಆಕರ್ಷಕ ಜಾಹಿರಾತುಗಳಿಗೆ ಜನರು ಮರಳಾಗಿ ತಮ್ಮ ವೈಯಕ್ತಿಕ ಡೇಟಾವನ್ನು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.