ಬೆಂಗಳೂರು(ಫೆ:15): ದೇಶದೆಲ್ಲೆಡೆ ಪುಲ್ವಾಮಾ ದಾಳಿಗೆ ಅನೇಕ ವಿರೋಧಗಳು ವ್ಯಕ್ತವಾಗುತ್ತಿವೆ. ಈ ವಿಚಾರವಾಗಿ ರಿಟೈರ್ಡ್ ಐ ಜಿ ಪಿ ಶಂಕರ್ ಬಿದರಿ ತಮ್ಮ ಟ್ವಿಟ್ಟರ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೋದಿ ಅವರಿಗೆ ಟ್ವೀಟ್ ಮಾಡಿರುವ ಅವರು ನಂಗೆ ಈಗ 64 ವರ್ಷ ವಯಸ್ಸಾಗಿದೆ,ಸೂಕ್ತವಾದ ಹುದ್ದೆಯನ್ನು ನೀಡಿದರೆ ಕಾಶ್ಮೀರಕ್ಕೆ ಹೋಗಲು ನಾನು ಸಿದ್ದನಿದ್ದೇನೆ. ಕಾಶ್ಮೀರದಿಂದ ಭಯೋತ್ಪಾದನೆಯನ್ನು ಅಳಿಸಿ ಹಾಕಲು ಪಣತೊಡುತ್ತೇನೆ,ಈ ಕಾರಣಕ್ಕಾಗಿ ನನ್ನ ಜೀವನವನ್ನು ತ್ಯಾಗ ಮಾಡಲು ನಾನು ಸಿದ್ಧ ಎಂದು ಹೇಳಿದ್ದಾರೆ.

ರಾಷ್ಟ್ರದ ಏಕತೆ ಮತ್ತು ಸಮಗ್ರತೆಯ ರಕ್ಷಣೆಗಾಗಿ ಸರ್ವೋತ್ಕೃಷ್ಟ ತ್ಯಾಗ ಮಾಡಿದ 42 ಪೊಲೀಸರ ಗೌರವಾರ್ಥವಾಗಿ ರಾಷ್ಟ್ರೀಯ ದಿನಾಚರಣೆ ದಿನವಾಗಿ ಒಂದು ದಿನ ದಯೆಯಿಂದ ಘೋಷಿಸಿ ಎಂದು ಟ್ವೀಟ್ ಮಾಡಿದ್ದಾರೆ.