ಹೈದರಾಬಾದ್(ಡಿ.19): ನನ್ನನ್ನು ಮಿಲ್ಕಿ ಬ್ಯೂಟಿ ಎಂದು ಕರೆಯಬೇಡಿ. ಆ ರೀತಿ ಕರೆದರೆ ನನಗೆ ಕೋಪ ಬರುತ್ತದೆ ಎಂದು ಬಹುಭಾಷಾ ನಟಿ ತಮನ್ನಾ ಭಾಟಿಯಾ ಹೇಳಿದ್ದಾರೆ.

ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ನನ್ನ ಸ್ಕಿನ್ ಕಲರ್ ಆಧಾರದ ಮೇಲೆ ಮಿಲ್ಕಿ ಬ್ಯೂಟಿ ಎಂದು ಕರೆಯುತ್ತಾರೆ. ಈ ರೀತಿ ಬಣ್ಣದ ಆಧಾರದ ಮೇಲೆ ಯಾರನ್ನೂ ಅಳೆಯಬಾರದು. ಚಿತ್ರರಂಗದಲ್ಲಿ ಈಗ ಇದು ಜಾಸ್ತಿಯಾಗಿದೆ. ಈ ರೀತಿ ಮಾಡುವುದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ತಮನ್ನಾ ಅವರ ಚರ್ಮ ಹಾಲಿನ ಬಣ್ಣ ಹೊಂದಿದ್ದು, ಎಲ್ಲರು ಅವರನ್ನು ಮಿಲ್ಕಿ ಬ್ಯೂಟಿ ಎಂದು ಕರೆಯುತ್ತಾರೆ. ಇನ್ನು ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಸಿನಿಮಾದಲ್ಲಿ ತಮನ್ನಾ ಸ್ಪೇಷಲ್ ಹಾಡಿಗೆ ಹೆಜ್ಜೆ ಹಾಕಿದ್ದಾರೆ.