ಬೆಂಗಳೂರು(ಮಾ:18):ಸುಮಲತಾ ಅಂಬರೀಶ್ ರವರು ಇಂದು ಅಧಿಕೃತವಾಗಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ವಿಚಾರವನ್ನು ಇಂದು ಸುದ್ದಿಗೋಷ್ಠಿಯಲ್ಲಿ ಘೋಷಿಸಿದರು.ಇದೆ ಸಂದರ್ಭದಲ್ಲಿ ಯಶ್,ದರ್ಶನ್,ರಾಕ್ಲೈನ್ ವೆಂಕಟೇಶ್ ಹಾಜರಿದ್ದರು.
ಈ ಸಂದರ್ಭದಲ್ಲಿ ಹಾಜರಿದ್ದ ನಟ ಯಶ್ ಸುಮಲತಾ ಅಂಬರೀಶ್ ಯೋಗ್ಯ ಅಭ್ಯರ್ಥಿ,ಅಂಬರೀಶ್ ರವರು ಮಂಡ್ಯದ ಹೆಸರನ್ನು ದೇಶದೆಲ್ಲೆಡೆ ಕೊಂಡೊಯ್ದ ವ್ಯಕ್ತಿ ಅವರ ಮನೆ ಮಕ್ಕಳಾಗಿ ನಾವು ಸುಮಲತಾ ರವರಿಗೆ ಬೆಂಬಲಿಸುತ್ತೇವೆ ಎಂದರು.ಅದಕ್ಕೆ ಪತ್ರಕರ್ತರೊಬ್ಬರು ನಿಖಿಲ್ ಯೋಗ್ಯರಲ್ಲವೇ ಎಂದಾಗ ಯಶ್ ನೀವು ಚನ್ನಾಗಿ ಕಾಣಿಸ್ತಿರಿ ಅಂದರೆ ಬೇರೆಯವರು ಚನ್ನಾಗಿಲ್ಲ ಎಂದು ಅರ್ಥವಲ್ಲ. ನೆಗೆಟಿವ್ ಆಗಿಯೇ ಯಾಕೆ ಯೋಚಿಸುತ್ತೀರಿ ಎಂದರು.ಯಶ್ ಉತ್ತರಕ್ಕೆ ಪತ್ರಕರ್ತರು ಸುಮ್ಮನಾದ ಘಟನೆ ಸುದ್ದಿಗೋಷ್ಠಿಯಲ್ಲಿ ನಡೆಯಿತು.