ಬಾಗಲಕೋಟೆ: ಇಂದು ವೀರಪ್ಪನ್ ಇದ್ದಿದ್ರೆ ಅರಣ್ಯ ಮಂತ್ರಿಯಾಗುತ್ತಿದ್ದ ಎಂದು ಕಾಂಗ್ರೆಸ್ ಮುಖಂಡ ಪ್ರಭುದೇವ್ ಹಗರಟಗಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಪ್ರಭುದೇವ್ ಹಗರಟಗಿ ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣದ ಬಾಗಲಕೋಟೆ ಜಿಲ್ಲಾ ಸಂಯೋಜಕರಾಗಿದ್ದಾರೆ. ತನ್ ಫೇಸ್ ಬುಕ್ ಪ್ರೊಫೈಲ್ ಬದಲಾಯಿಸಿರುವ ಪ್ರಭುದೇವ್, ವೀರಪ್ಪನ್ ಫೋಟೋ ಅಪ್ಲೋಡ್ ಮಾಡಿಕೊಂಡಿದ್ದಾರೆ. ತಮ್ಮ ಫ್ರೆಂಡ್ ಲಿಸ್ಟ್ ನಲ್ಲಿದ್ದ ಒಬ್ಬರು ಏನ್ ಸರ್ ಇದರ ಅರ್ಥ ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಪ್ರಭುದೇವ್, ಇಂದು ವಿರುಪ್ಪನ್ ಇದ್ದಿದ್ರೆ ಅರಣ್ಯ ಮಂತ್ರಿಯಾಗಿರೋನು ಎಂದು ಹೇಳಿದ್ದಾರೆ.

ವೀರಪ್ಪನ್ ಬದುಕಿರುತ್ತಿದ್ದರೆ ಇಂದು ಕೇಂದ್ರದಲ್ಲಿ ಮಂತ್ರಿಯಾಗಿರುತ್ತಿದ್ದ ಎಂದು ಹೇಳುವ ಮೂಲಕ ಕೇಂದ್ರ ಬಿಜೆಪಿ ಸಚಿವ ಸಂಪುಟವನ್ನು ಬಗ್ಗೆ ವ್ಯಂಗ್ಯವಾಡಿದ್ದಾರೆ. ಈ ವಿಚಾರ ಸುದ್ದಿಯಾಗುತ್ತಿದ್ದಂತೆಯೇ ಬಿಜೆಪಿಯವರು ಪ್ರಭುದೇವ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಫೇಸ್ ಬುಕ್ ನಲ್ಲಿ ತರಾಟೆಗೆ ತೆಗೆದುಕೊಳ್ಳುತ್ತಿದ್ದಂತೆ ಪ್ರಭುದೇವ್ ವೀರಪ್ಪನ್ ಫೋಟೋ ತೆಗೆದು ಹಾಕಿದ್ದಾರೆ.