ಭುವನೇಶ್ವರ(ಫೆ.04): ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಒಡಿಶಾದಲ್ಲಿದ್ದು ಒಡಿಯಾ ಭಾಷೆ ಗೊತ್ತಿಲ್ಲವೆಂದರೆ ಅವರಿಗೆ ಆಡಳಿತ ನಡೆಸುವ ಯಾವುದೇ ಹಕ್ಕು ಇಲ್ಲ ಎಂದು ಹೇಳಿದ್ದಾರೆ.

ಸಿಎಂ ನವೀನ್ ಪಟ್ನಾಯಕ್ ಒರಿಸ್ಸಾದಲ್ಲಿ ಅಯುಷ್ಮಾನ್ ಭಾರತ್ ಯೋಜನೆಯನ್ನು ಜಾರಿಗೊಳಿಸಿಲ್ಲ, ಏಕೆಂದರೆ ಅದು ನರೇಂದ್ರ ಮೋದಿ ಜಿ ಜನಪ್ರಿಯತೆಯನ್ನು ಹೆಚ್ಚಿಸುತ್ತದೆ ಎಂದು ಆತಂಕದಲ್ಲಿದ್ದಾರೆ. ಏಕೆ ನೀವು ಓಡಿಸ್ಸಾದ ಬಡ ಜನರಿಗೆ ತೊಂದರೆ ಕೊಡುತ್ತಿರಿ ಎಂದು ಷಾ ಕಿಡಿಕಾರಿದರು.

ಮಧ್ಯಂತರ ಬಜೆಟ್ ನಿಂದಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಗೆಲ್ಲುವ ಭರವಸೆ ಕಳೆದುಕೊಂಡಿದ್ದಾರೆ. ಅಲ್ಲದೆ ತಮ್ಮ ಪಕ್ಷವನ್ನು ಬುಡಕಟ್ಟು ಜನರ ಚಾಂಪಿಯನ್ ಎಂದು ಹೇಳಿದರು. ನರೇಂದ್ರ ಮೋದಿ ಸರ್ಕಾರ ಆದಿವಾಸಿಗಳ ಕಲ್ಯಾಣಕ್ಕಾಗಿ 50 ಸಾವಿರ ಕೋಟಿ ರೂಗಳನ್ನು ವೆಚ್ಚ ಮಾಡಿದೆ ಎಂದು ತಿಳಿಸಿದರು.