ಹೈದರಾಬಾದ್(ಫೆ,21): ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರ ಭೀಕರ ದಾಳಿಗೆ ಸಂಬಂಧಿಸಿದಂತೆ ಸಾಕ್ಷ್ಯಗಳಿಲ್ಲದೆ ಭಾರತ ಪಾಕಿಸ್ತಾನದ ಮೇಲೆ ಆರೋಪ ಮಾಡುತ್ತಿದೆ ಎಂದು ಹೇಳಿದ್ದ ಪಾಕ್ ಪ್ರಧಾನಿಗೆ ನಿರ್ದೇಶಕ ರಾಮ್ ಗೋಪಲ್ ವರ್ಮಾ ಟಾಂಗ್ ನೀಡಿದ್ದಾರೆ.

ಹೌದು ಈ ಕುರಿತು ಟ್ವಿಟ್ಟ ಮಾಡಿರುವ ವರ್ಮಾ, ಎಲ್ಲಾ ಸಮಸ್ಯೆಗಳು ಮಾತುಕತೆಯಿಂದಲೆ ಬಗೆಹರಿಯುವುದಾದರೇ 3ನೇ ಮದುವೆ ಅಗತ್ಯವಿರಲಿಲ್ಲ ಎಂದು ಹೇಳಿದ್ದಾರೆ.

ಅಮೆರಿಕ ದೇಶಕ್ಕೆ ಲಾಡೆನ್ ಪಾಕಿಸ್ತಾನದಲ್ಲಿ ವಾಸವಾಗಿದ್ದಾನೆ ಎನ್ನುವ ಅಂಶ ತಿಳಿದಿದ್ದು, ಆದರೆ ಪಾಕಿಸ್ತಾನಕ್ಕೆ ಮಾತ್ರ ಇದರ ಅರಿವು ಆಗಿಲ್ಲ. ನಿಮ್ಮ ದೇಶದಲ್ಲಿ ಯಾರಿದ್ದಾರೆ ಎಂಬುವುದೇ ನಿಮಗೆ ತಿಳಿದಿಲ್ಲವೇ ಎಂದು ವ್ಯಂಗ್ಯವಾಗಿ ಸರಣಿ ಟ್ವೀಟ್ ಮಾಡಿದ್ದಾರೆ.

ಉಗ್ರ ಸಂಘಟನೆಗಳಾದ ಜೈಶ್ ಇ ಮೊಹಮದ್, ಲಷ್ಕರ್ ಎ ತೋಯಿಬಾ, ತಾಲಿಬಾನ್, ಅಲ್ ಕೈದಾ ಸಂಘಟನೆಗಳು ಪಾಕಿಸ್ತಾನದಲ್ಲಿ ಅಶ್ರಯ ಪಡೆದಿದೆ ಎಂದು ಯಾರು ನನಗೆ ಹೇಳಿಲ್ಲ. ಆದರೆ ಒಮ್ಮೆಯೂ ನೀವು ಉಗ್ರ ಸಂಘಟನೆಗಳು ಪಾಕಿಸ್ತಾನದಲ್ಲಿ ಇಲ್ಲ ಎನ್ನುವ ಹೇಳಿಕೆಯನ್ನೇ ನೀಡಿಲ್ಲ ಏಕೆ ಎಂದು ಪ್ರಶ್ನಿಸಿದ್ದಾರೆ.

ಪುಲ್ವಾಮಾ ದಾಳಿಯ 3 ದಿನಗಳ ಬಳಿಕ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಪ್ರತಿಕ್ರಿಯೆ ನೀಡಿದ್ದರು. ಈ ವೇಳೆ ಸಾಕ್ಷ್ಯಗಳಿಲ್ಲದೆ ಭಾರತ ಪಾಕಿಸ್ತಾನ ಮೇಲೆ ಆರೋಪ ಮಾಡುತ್ತಿದೆ. ಭಾರತ ಏನಾದರೂ ಯುದ್ದಕ್ಕೆ ಮುಂದಾದರೆ ನಾವು ಪ್ರತ್ಯುತ್ತರವನ್ನು ನೀಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದರು.