ಮುಂಬೈ(ಮಾ:11): ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಭಾರತೀಯ ಯೋಧರಿಗೆ ಗೌರವ ಸಲ್ಲಿಸುವ ಸಲುವಾಗಿ ಆಸ್ಟ್ರೇಲಿಯಾ ವಿರುದ್ಧದ 3ನೇ ಏಕದಿದ ಪಂದ್ಯದಲ್ಲಿ ಭಾರತದ ಆಟಗಾರರು ಸೇನಾ ಕ್ಯಾಪ್ ಧರಿಸಿದ್ದಕ್ಕೆ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಹಾಗೂ ರಾಜಕಾರಣಿಗಳು ಕ್ಯಾತೆ ತೆಗೆದಿದ್ದು,ಇದೀಗ ಐಸಿಸಿ ಇಂದ ಮುಖಭಂಗ ಅನುಭವಿಸಿದೆ.

3ನೇ ಏಕದಿನ ಪಂದ್ಯದಲ್ಲಿ ಸೇನಾ ಕ್ಯಾಪ್ ಧರಿಸಿ ಭಾರತೀಯ ಆಟಗಾರು ಅಂಕಣಕ್ಕಿಳಿದಿದ್ದರು. ಇದನ್ನು ಪ್ರಶ್ನಿಸಿದ್ದ ಪಿಸಿಬಿ,ಐಸಿಸಿ ಗೆ ದೂರು ನೀಡಿತ್ತು,ಅಷ್ಟೇ ಅಲ್ಲದೇ ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿಸಿತ್ತು.

ರಾಂಚಿ ಪಂದ್ಯವನ್ನು ಸೈನಿಕರಿಗೆ ಅರ್ಪಿಸಿದ ಟೀಮ್ ಇಂಡಿಯಾ ಇದಕ್ಕೆ ಪ್ರತಿಕ್ರಿಯಿಸಿರುವ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಭಾರತ ಕ್ರಿಕೆಟ್ ತಂಡ ಸೇನಾ ಕ್ಯಾಪ್ ಧರಿಸುವುದಾಗಿ ಮುಂಚಿತವಾಗಿಯೇ ಐಸಿಸಿ ಇಂದ ಅನುಮತಿ ಪಡೆದಿತ್ತು. ಅಲ್ಲದೆ ಆ ಪಂದ್ಯದಲ್ಲಿನ ಆಟಗಾರರ ಸಂಭಾವನೆಯ ಮೊತ್ತವನ್ನು ಸೈನಿಕರ ನಿಧಿಗೆ ನೀಡುವುದಾಗಿ ಬಿಸಿಸಿಐ ಅನುಮತಿ ಕೋರಿತ್ತು ಎಂದು ಸಿಇಓ ಡೇವ್ ರಿಚರ್ಡ್ಸನ್ ತಿಳಿಸಿದ್ದಾರೆ.