ಬೆಂಗಳೂರು(ಜೂ,08): ಐಎಎಸ್ ಅಧಿಕಾರಿಯ ಮಗಳ ಮದುವೆ ಎಂದರೇ ಬಹಳ ವಿಜೃಂಬಣೆಯಿಂದ ನಡೆಯುತ್ತೆ, ಅನ್ನೋದು ಸಮಾನ್ಯ ಜನರ ಭಾವನೆ ಮತ್ತು ಹೆಚ್ಚು ಕಮ್ಮಿ ಅದು ನಿಜಾನು ಆಗಿರುತ್ತೆ. ಆದರೆ ರಾಜ್ಯ ಮುಖ್ಯ ಕಾರ್ಯದರ್ಶಿ ವಿಜಯಭಾಸ್ಕರ್ ಮಗಳ ಮದುವೆಗೆ ಕೇವಲ ಒಂದೇ ದಿನ ರಜೆ ತೆಗೆದುಕೊಂಡಿದ್ದಾರೆ.

ಇದೇ ಭಾನುವಾರ ನಡೆಯಲಿರುವ ವಿಜಯಭಾಸ್ಕರ್ ಅವರ ಮಗಳು ಉದ್ಯಮಿ ಗೌತಮ್ ಕುಮಾರ್ ಅವರನ್ನು ವರಿಸುತ್ತಿದ್ದಾರೆ. ಇನ್ನು ಮದುವೆಯನ್ನು ಸಹ ಸರಳವಾಗಿ ಮಾಡಬೇಕೆಂದು ನಿರ್ಧಾರ ಮಾಡಿರೋ ವಿಜಯಭಾಸ್ಕರ್ ಮಲ್ಲೇಶ್ವರಂ ನಲ್ಲಿರುವ ಟಿಟಿಡಿ ಕಲ್ಯಾಣ ಮಂಟಪದಲ್ಲಿ ಮಾಡುತ್ತಿದ್ದಾರೆ.

ಇದರ ದಿನದ ಬಾಡಿಗೆ 1 ಲಕ್ಷದ 44 ಸಾವಿರದ 500. ಯಾವುದೇ ಸರ್ಕಾರಿ ವಾಹನಗಳನ್ನು ಬಳಸದೆ ಖಾಸಗಿ ಟ್ರಾವೆಲ್ಸ್ ಮೂಲಕ ವಾಹನಗಳನ್ನು ಬಾಡಿಗೆಗೆ ತರಿಸುತ್ತಿದ್ದಾರೆ. ಮದುವೆ ಆಮಂತ್ರಣ ಪತ್ರಿಕೆಯೂ ಕೂಡ ಅವರ ಸರಳತೆ, ನಿಗರ್ವಿತನಕ್ಕೆ ಸಾಕ್ಷ್ಯದಂತಿದೆ. ಆರ್ಡಿನರಿಯಾಗಿ ವೆಡ್ಡಿಂಗ್ ಕಾರ್ಡ್ ಪ್ರಿಂಟ್ ಮಾಡಿಸಿದ್ದಾರೆ. ಕಾರ್ಡ್ ನಲ್ಲಿ ತಮ್ಮ ಹುದ್ದೆ ಹಾಗೂ ಅಧಿಕಾರವನ್ನು ಉಲ್ಲೇಖಿಸದೆ ಕೇವಲ ವಿಜಯಭಾಸ್ಕರ್ ಎಂದು ಮೆನ್ಷನ್ ಮಾಡಿದ್ದಾರೆ. ತಮ್ಮ ಸಿಬ್ಬಂದಿಗೆ ಖುದ್ದು ಇನ್ವಿಟೇಷನ್ ಕೊಟ್ಟು ಮದುವೆಗೆ ಬರುವಂತೆ ವಿನಂತಿಸಿದ್ದಾರೆ.