ಬೆಂಗಳೂರು(ಫೆ.11): ಕಿರಿಕ್ ಪಾರ್ಟಿ ಮೂಲಕ ಕನ್ನಡಕ್ಕೆ ಎಂಟ್ರಿ ಕೊಟ್ಟ ರಶ್ಮಿಕಾ ಮಂದಣ್ಣ ಅವರು ಸಾವಿರಾರು ಅಭಿಮಾನಿಗಳನ್ನು ಹೊಂದಿದ್ದಾರೆ. ಇದೀಗ ಅವರ ಅಭಿಮಾನಿಯೊಬ್ಬ ಭೇಟಿ ಮಾಡಿದರೆ ನಾನು ನಿಮ್ಮನ್ನು ತಬ್ಬಿಕೊಳ್ಳಬೇಕು ಎಂದು ಪತ್ರ ಬರೆದಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ನ್ಯೂ ಯಾರ್ಕ್ ನಿಂದ 8 ವರ್ಷದ ಪುಟ್ಟ ಅಭಿಮಾನಿಯೊಬ್ಬ ರಶ್ಮಿಕಾ ಅವರಿಗೆ ಪತ್ರ ಬರೆದಿದ್ದಾನೆ. ಈ ಪತ್ರವನ್ನು ರಶ್ಮಿಕಾ ಅವರ ಫ್ಯಾನ್ ಕ್ಲಬ್ ತನ್ನ ಟ್ವಿಟ್ಟರಿನಲ್ಲಿ,ರಶ್ಮಿಕಾ ಅವರಿಗೆ ಟ್ಯಾಗ್ ಮಾಡಿದ್ದಾರೆ.

ನೀವು ತುಂಬಾ ಅದ್ಭುತವಾದ ಮಹಿಳೆ. ನಿಮ್ಮ ಮುಖ ತುಂಬಾ ಚೆನ್ನಾಗಿ ಇದೆ. ನನಗೆ ನಿಮ್ಮ ಸಿನಿಮಾಗಳು ಹಾಗೂ ಹಾಡುಗಳು ಎಂದರೆ ಇಷ್ಟ. ನಿಮ್ಮ ಗೀತಾ ಗೋವಿಂದಂ ಸಿನಿಮಾ ನೋಡಿ ಮಹಿಳೆಯರನ್ನು ಹೇಗೆ ಗೌರವಿಸಬೇಕು ಎಂದು ಕಲಿತುಕೊಂಡೆ. ನೀವು ಮಾತನಾಡುವ ಶೈಲಿ ಹಾಗೂ ನಿಮ್ಮ ಅಭಿನಯ ನನಗೆ ತುಂಬಾ ಇಷ್ಟ. . ನಿಮ್ಮ ಚಿತ್ರದ ಹಾಡುಗಳು ಹಾಸ್ಯವಾಗಿ, ಇರುತ್ತದೆ. ನಾನು ಗೀತಾ ಗೋವಿಂದಂ ಚಿತ್ರ ಹಾಗೂ ಆ ಚಿತ್ರದ ಹಾಡುಗಳನ್ನು ಕೇಳಿದ್ದೇನೆ. ನೀವು ಹೆಚ್ಚು ಸಿನಿಮಾ ಹಾಗೂ ಹಾಡಗಳನ್ನು ಮಾಡುತ್ತೀರಾ ಎಂದು ನನಗೆ ಗೊತ್ತು. ಮುಂದೆ ನಿಮ್ಮನ್ನು ಭೇಟಿ ಮಾಡಿದರೆ ನಾನು ನಿಮ್ಮನ್ನು ತಬ್ಬಿಕೊಳ್ಳಬೇಕು ಎಂದು ಬರೆದಿದ್ದಾನೆ.