ಮುಂಬೈ(ಜು:09): ಬ್ಲಾಕ್ ಮೇಲ್ ಮಾಡುವ ಉದ್ದೇಶದಿಂದ ತಮ್ಮ ಹೆಸರು ಹಾಳು ಮಾಡುವ ಪ್ರಯತ್ನ ಮಾಡಲಾಗಿದೆ ಎಂದು ಮಾಜಿ ಸಚಿವ ಎಚ್.ವಿಶ್ವನಾಥ್ ಆರೋಪಿಸಿದ್ದಾರೆ.

ತಮ್ಮ ವಿರುದ್ಧದ ಅಶ್ಲೀಲ ಆಡಿಯೋವನ್ನು ಬಿಡುಗಡೆ ಮಾಡಿರುವುದರ ಹಿಂದೆ ಎದುರಾಳಿಗಳ ಷಡ್ಯಂತ್ರವಿದೆ. ಇದರಲ್ಲಿ ಯಾವುದೇ ಸತ್ಯವಿಲ್ಲ, ನನ್ನ ಜೀವನ ಏನೆಂಬುದು ನನ್ನ ಕ್ಷೇತ್ರದ ಜನರಿಗೆ ಗೊತ್ತಿದೆ. ಇದಕ್ಕೆಲ್ಲ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಹುಣಸೂರು ಕ್ಷೇತ್ರದಲ್ಲಿ ನನ್ನ ಎದುರಾಳಿಗಳು ಏನೆಲ್ಲ ಮಾಡಿದ್ದಾರೆ ಎಂಬುದು ನನಗೆ ಗೊತ್ತಿದೆ ಎಂದಿದ್ದಾರೆ.

ಇಂತಹ ಬೆದರಿಕೆಗೆ ಬಗ್ಗುವ ಜಾಯಮಾನ ನನ್ನದಲ್ಲ, ಬ್ಲಾಕ್‍ ಮೇಲ್ ಮಾಡುವ ಉದ್ದೇಶದಿಂದ ಇಂತಹ ಷಡ್ಯಂತ್ರ ಮಾಡಿದ್ದು, ಇದು ಕೀಳುಮಟ್ಟದ ರಾಜಕೀಯವಾಗಿದೆ, ನನ್ನ ವೈಯಕ್ತಿಕ ಜೀವನ, ಆರ್ಥಿಕ ಪರಿಸ್ಥಿತಿ ಎಲ್ಲ ವಿಚಾರಗಳನ್ನೂ ಹಳ್ಳಿಹಕ್ಕಿ ಕೃತಿಯಲ್ಲಿ ಬರೆದಿದ್ದೇನೆ. ಸಚಿವ ಸ್ಥಾನ ಸೇರಿದಂತೆ ಯಾವುದೇ ಆಮಿಷಕ್ಕೆ ನಾನು ಒಪ್ಪದ ಕಾರಣ ಈ ಹೊಸ ಪ್ರಯೋಗ ಮಾಡಲಾಗಿದ್ದು, ಇಂತಹ ಕುತಂತ್ರಗಳು ಫಲ ನೀಡುವುದಿಲ್ಲ ಎಂದು ತಿಳಿಸಿದ್ದಾರೆ.