ಬೆಂಗಳೂರು(ಮೇ:30): ನಾನು ಯಾವುದೇ ಕಾರಣಕ್ಕು ಪಕ್ಷ ಬೀಡುದಿಲ್ಲ, ನಿನ್ನೆ ಶಾಸಕಾಂಗ ಸಭೆಯಿಂದಿ ಬೇಗ ಹೋಗಿದ್ದು ನಿಜ ಖಾಸಗಿ ಕಾರ್ಯಕ್ರಮ ಹಿನ್ನೆಲೆ ಬೇಗ ಹೋಗಬೇಕಾಯಿತು. ನನಗೆ ಯಾವುದೇ ಅಸಮಾಧಾನ ಇಲ್ಲ. ಸಚಿವ ಸ್ಥಾನ ಸಿಕ್ಕ ಮೇಲೆ ನಾನು ಸಂತೋಷದಿಂದ ಇದ್ದೇನೆ. ನಾನು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷ ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಸಚಿವ ಸ್ಥಾನ ಸಿಗದೇ ಇದ್ದಾಗ ಅಸಮಾಧಾನ ಇದ್ದದ್ದು ನಿಜ. ಸಚಿವ ಸ್ಥಾನ ಬಿಟ್ಟು ಕೊಡಿ ಎಂದು ಹೈಕಮಾಂಡ್ ಆದೇಶ ಮಾಡಿದರೆ ಅದಕ್ಕೆ ನಾನು ಬದ್ದ ಮೂರು ತಿಂಗಳೋ ಮೂರು ದಿನವೋ ಸಚಿವ ಆಗಬೇಕಿತ್ತು ನಾನು ಸಚಿವನಾಗಿದ್ದೇನೆ ಸಾಕು. ಮುಂದುವರಿಸಿದ್ರೂ ಖುಷಿ,ಬಿಟ್ಟು ಕೊಡಿ ಅಂದ್ರು ಅಸಮಾಧಾನ ಇರಲ್ಲ ಎಂದಿದ್ದಾರೆ.