ಕ್ರೈಸ್ಟ್‌ ಚರ್ಚ್(ಮಾ:18): ನ್ಯೂಜಿಲೆಂಡ್‌ನಲ್ಲಿ ಮಸೀದಿ ಮೇಲೆ ಗುಂಡಿನ ದಾಳಿ ನಡೆಸಿ ಸುಮಾರು 50 ಮಂದಿಯನ್ನು ಹತ್ಯೆ ಮಾಡಿದ ಆಸ್ಟ್ರೇಲಿಯಾದ ಉಗ್ರ ಬ್ರೆಂಟನ್ ಟೆರಾಂಟ್ ತನ್ನ ಪರ ವಕೀಲರನ್ನು ವಜಾಗೊಳಿಸಿ, ತಾನೇ ಸ್ವತಃ ವಾದ ಮಂಡಿಸಲು ಮುಂದಾಗಿದ್ದಾನೆ.

ಕ್ರೈಸ್ಟ್‌ ಚರ್ಚ್‌ನ ನ್ಯಾಯಾಲಯದಲ್ಲಿ ಶನಿವಾರ ಟೆರಾಂಟ್‌ನನ್ನು ಪ್ರತಿನಿಧಿಸಿದ್ದ ರಿಚರ್ಡ್‌ ಪೀಟರ್ಸ್ ಈ ಸುದ್ಧಿಯನ್ನು ಖಚಿತಪಡಿಸಿದ್ದಾರೆ. ಟೆರಾಂಟ್ ತನ್ನ ನಡೆಯ ಬಗ್ಗೆ ಸ್ಪಷ್ಟವಾಗಿರುವಂತೆ ಕಾಣಿಸುತ್ತಿದ್ದು, ಆತ ಮಾನಸಿಕವಾಗಿ ಸ್ಥಿರವಾಗಿದ್ದಾನೆ ಎಂದು ತಿಳಿಸಿದ್ದಾರೆ.

ಆರೋಪಿಯು ನ್ಯಾಯಾಲಯದಲ್ಲಿ ಸ್ವತಃ ವಾದ ಮಂಡಿಸಲು ಹಠ ಹಿಡಿದಿದ್ದಾನೆ. ಹೀಗಾಗಿ ತಮ್ಮ ಕೆಲಸ ಶನಿವಾರದ ವಿಚಾರಣೆಯೊಂದಿಗೆ ಮುಕ್ತಾಯಗೊಂಡಿದೆ ಎಂದು ಪೀಟರ್ಸ್ ತಿಳಿಸಿದ್ದಾರೆ.