ನವದೆಹಲಿ[ಫೆ.09]: ಇದು ನನ್ನ ಕೊನೇ ಭಾಷಣ ಆಗಬಹುದು ಎಂದು ಸ್ಪೀಕರ್ ಅವರಲ್ಲಿ ಮನವಿ ಮಾಡಿಕೊಂಡಿದ್ದರೂ ಲೋಕಸಭೆಯಲ್ಲಿ ನನಗೆ ಮಾತನಾಡಲು ಅವಕಾಶ ಸಿಕ್ಕಿಲ್ಲ ಎಂದು ಎಚ್.ಡಿ.ದೇವೇಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇವಲ 5 ನಿಮಿಷಕ್ಕೆ ನನ್ನ ಮಾತು ಮೊಟಕುಗೊಳಿಸುವಂತೆ ಮಾಡಲಾಯಿತು. ಲೋಕಸಭೆಯಲ್ಲಿ ನನಗೆ ಮಾತನಾಡಲು ಅವಕಾಶ ಸಿಕ್ಕಿಲ್ಲ. ಶುಕ್ರವಾರ ಕೂಡ ನನ್ನ ಮನವಿಗೆ ಮನ್ನಣೆ ಸಿಗಲಿಲ್ಲ. ಪದೇ ಪದೆ ಮನವಿ ಮಾಡಿಕೊಂಡರೂ ನನ್ನನ್ನು ಸ್ಪೀಕರ್ ಗಮನಿಸದ ಹಿನ್ನೆಲೆಯಲ್ಲಿ ತಾಳ್ಮೆ ಕಳೆದುಕೊಂಡೆ. ಆದರೆ ಸೋಮವಾರ ಹಣಕಾಸು ವಿಧೇಯಕದ ಬಗ್ಗೆ ಮಾತಾನಾಡಲು ಅವಕಾಶ ನೀಡುವುದಾಗಿ ಸ್ಪೀಕರ್ ಹೇಳಿದ್ದಾರೆ ಎಂದು ದೇವೇಗೌಡ ತಿಳಿಸಿದರು.